ಕಥೊಲಿಕ್ ಸಭಾ ಕುಂದಾಪುರ ಘಟಕ: ಕ್ರಿಕೆಟ್ – ತ್ರೋಬಾಲ್ ಪಂದ್ಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ಘಟಕದಿಂದ ಅವರ ವಾರ್ಷಿಕೊತೋತ್ಸವದ ಸಲುವಾಗಿ ಏರ್ಪಡಿಸಲಾಗಿದ್ದ ಪುರುಷರ ಕ್ರಿಕೆಟ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾವಳಿಯನ್ನು ವಲಯದ ಪ್ರಧಾನ ವ|ಧರ್ಮಗುರು ಅನೀಲ್ ಡಿಸೋಜಾ ಉದ್ಘಾಟಿಸಿದರು.

Click here

Click Here

Call us

Call us

Visit Now

Call us

Call us

ಘಟಕದ ಅಧ್ಯಕ್ಷ ವಿಲ್ಸನ್ ಆಲ್ಮೇಡಾ ಸ್ವಾಗತಿಸಿದರು. ನಿಯೋಜಿತ ಅಧ್ಯಕ್ಷ ಜಾಕೋಬ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಧರ್ಮಗುರು ವ|ಪಾವ್ಲ್ ಪ್ರಕಾಶ್ ಡಿಸೋಜಾ, ಕಾರ್ಯದರ್ಶಿ ಶೈಲಾ ಆಲ್ಮೇಡಾ, ಸುನೀಲ್ ಡಿಸೋಜಾ, ಹಾಗೂ ಪಂದ್ಯಾವಳಿಯ ತೀರ್ಪುಗಾರರಾಗಿದ್ದರು. ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ವೀಕ್ಷಕ ವಿವರಣೆ ನೀಡಿದರು.

ಮೂವತ್ತು ಯಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 9 ವಾಡೆಯ ಪಂಗಡಗಳು ಭಾಗವಹಿಸಿ ಅಂತಿಮವಾಗಿ ಲೂರ್ಡ್ಸ್ ವಾಡೆಯವರು ಪ್ರಥಮ ಸ್ಥಾನ ಪಡೆದರೆ ದ್ವೀತಿಯ ಸ್ಥಾನವನ್ನು ಫಾತಿಮಾ ವಾಡೆಯವರು ಗಳಿಸಿಕೊಂಡರು. ಲುರ್ಡ್ಸ್ ವಾಡೆಯ ಅನೀಲ್ ಡಿಸೋಜಾ ಅತ್ಯಧಿಕ ರನ್ನುಗಳನ್ನು ಹಾಗೆ ವಿಕೆಟುಗಳನ್ನು ಪಡೆದು ಕೊಂಡರು.

ತ್ರೋಬಾಲ್ ಪಂದ್ಯಾವಳಿಯಲ್ಲಿ 6 ವಾಡೆಯ ಪಂಗಡದವರು ಭಾಗವಹಿಸಿದ್ದು, ಫಲಿತಾಂಶ್ ಪುನರಾವರ್ತಿಯಾಗಿ ಪ್ರಥಮ ಸ್ಥಾನವನ್ನು ಲೂರ್ಡ್ಸ್ ವಾಡೆಯವರು ತನ್ನಾದಾಗಿಸಿಕೊಂಡರೆ ದ್ವೀತಿಯ ಸ್ಥಾನವನ್ನು ಫಾತಿಮಾ ವಾಡೆಯವರು ಪಡೆದುಕೊಂಡರು.

Leave a Reply

Your email address will not be published. Required fields are marked *

five × three =