ಕುಂದಾಪುರ ಯುಜಿಡಿ ಜಾಗ ಖರೀದಿಗೆ ದುಪ್ಪಟ್ಟು ಹಣ ಪಾವತಿ: ಸಾಮಾನ್ಯ ಸಭೆಯಲ್ಲಿ ಆಕ್ಷೇಪ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪುರಸಭೆಯ ಯುಜಿಡಿ ಕಾಮಗಾರಿ ಫಿಟ್‌ವೆಲ್ ನಿರ್ಮಿಸಲು ಅಗತ್ಯವಿರುವ ಸ್ಥಳ ಖರೀದಿಗಾಗಿ ಸರ್ಕಾರವು ದುಪ್ಪಟ್ಟು ಹಣ ಪಾವತಿಸಿದೆ. ಯಾವುದೇ ಅಭಿವೃದ್ಧಿ ಕಾರ್ಯಮಾಡದ ಹೊಳೆ ಬದಿ ಜಾಗದಲ್ಲಿ ನಷ್ಟ ಪರಿಹಾರ ಎಂದು ತೋರಿಸಿ ಒಟ್ಟು 97 ಲಕ್ಷ ಜಾಗದ ಮಾಲೀಕರಿಗೆ ಸಂದಾಯ ಮಾಡಲಾಗಿದೆ. ಪುರಸಭೆ ಸದಸ್ಯರ ಅವಗಹಣೆಗೆ ತರದೇ ದುಪ್ಪಟ್ಟು ಹಣ ನೀಡಿ ಜಾಗ ಖರೀದಿಯ ಮಾಡಿರುವ ಹಿಂದಿನ ಉದ್ದೇಶವೇನು. ಜಾಗ ಖರೀದಿಗಾಗಿ ಸಂದಾಯ ಮಾಡಿರುವ ಹಣ ಕುರಿತು ತನಿಖೆ ನಡೆಸಬೇಕು ಎಂದು ಪುರಸಭೆ ಆಡಳಿತ ಪಕ್ಷ ಸದಸ್ಯ ಗಿರೀಶ್ ದೇವಾಡಿಗ ಹೇಳಿದ್ದಾರೆ.

Call us

Click here

Click Here

Call us

Call us

Visit Now

Call us

ಕುಂದಾಪುರ ಪುರಸಭೆ ಡಾ| ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಮಾತಿಗೆ ಸಭೆಯಲ್ಲಿ ಸಮಮತ ವ್ಯಕ್ತವಾಗಿದ್ದು, ತನಿಕೆಗೆ ಆಗ್ರಹಿಸಿದ್ದಾರೆ.

ಸರ್ಕಾರದ ದರಪಟ್ಟಿ ಹಾಗೂ ಭೂ ಮಾಲೀಕರಿಗೆ ಕೊಟ್ಟ ಪರಿಹಾರಕ್ಕೆ ಭಾರಿ ವ್ಯತ್ಯಾಸವಿದೆ. ಸಮಿತಿ ನಿಗದಿ ಮಾಡಿದ ದರಪಟ್ಟಿಯ ಬಗ್ಗೆ ಪುರಸಭೆ ಸಭೆಯಲ್ಲಿ ಗಮನಕ್ಕೆ ತಾರದೆ ಬರೋಬ್ಬರಿ 97 ಲಕ್ಷ ಹಣ ನೀಡಲಾಗಿದೆ. ಇದಕ್ಕೆ ಆಕ್ಷೇಪವಿದ್ದು, ಸಮಿತಿ ಮಾಡಿದ ದರಪಟ್ಟಿ ಬಗ್ಗೆ ತನಿಖೆಯಾಗಬೇಕು ಇಲ್ಲದಿದ್ದರೆ ನ್ಯಾಯಾಲದಲ್ಲಿ ದಾವೆ ಹೂಡುವುದಾಗಿ ಸದಸ್ಯ ಗಿರೀಶ್ ದೇವಾಡಿಗ ಎಚ್ಚರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗೋಪಾಕೃಷ್ಣ ಶೆಟ್ಟಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದರಪಟ್ಟಿ ನಿಗದಿಪಡಿಸಲಾಗಿದೆ. ಅವರು ಸೂಚಿಸಿದ ದರದಲ್ಲಿ ಹಣ ಪಾವತಿಸಲಾಗಿದೆ. ಈ ಬಗ್ಗೆ ಸದಸ್ಯರ ಆಕ್ಷೇಪ ದಾಖಲಿಸಿದರೆ ಅದರಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು. ದರಪಟ್ಟಿಯ ಬಗ್ಗೆ ಪುರಸಭೆ ಎಲ್ಲಾ ಸದಸ್ಯರು ಪ್ರತಿರೋಧ ಒಡ್ಡಿದ್ದರಿಂದ ಬಾಕಿಯಿರುವ ವೆಟ್‌ವೆಲ್ ಕಾಮಗಾರಿ ಪ್ರಕ್ರಿಯೆ ನಿಲ್ಲಿಸಲು ನಿರ್ಣಯ ಮಾಡುವಂತೆ ಸದಸ್ಯರಿಗೆ ಸೂಚಿಸಿದರು. ಮುಖ್ಯಾಧಿಕಾರಿಯ ಈ ಸಲಹೆಗೆ ತಿರುಗಿಬಿದ್ದ ಸದಸ್ಯರು ಅದು ಹೇಗೆ ಸಾಧ್ಯ? ಬಾಕಿಯಾದ ಎರಡು ಕಾಮಗಾರಿ ನಿಲ್ಲಿಸುವಂತೆ ನಿರ್ಣಯ ಮಾಡುವುದು ಸರಿಯಲ್ಲ. ಜಾಗ ಖರೀದಿಯಲ್ಲಿ ಪುರಸಭೆ ಹಣ ಪೋಲಾಗಿದೆ. ಸಾರ್ವಜನಿಕರ ಹಣ ಪೋಲಾಗಬಾರದು ಎನ್ನೋದು ಸದಸ್ಯರ ಕಳಕಳಿ. ಇನ್ನುಳಿದ ಎರಡು ಕಾಮಗಾರಿ ಜಾಗದ ವಿಕ್ರಯ ಕ್ರಮಬದ್ದವಾಗಿ ನಡೆದಿದ್ದರೆ ನಮ್ಮದೇನು ಅಭ್ಯಂತರವಿಲ್ಲ. ಉಳಿದ ಕಾಮಗಾರಿ ನಿಲ್ಲಿಸುವಂತೆ ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸದಸ್ಯರು ಹೇಳಿದರು.

ಮಲೇರಿಯಾ ರೋಗ ಮುನ್ನೆಚ್ಚರಿಕೆ, ರಸ್ತೆ, ವಿದ್ಯುತ್ ಕಂಬದ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಬೊಬ್ಬರ್ಯ ಕಟ್ಟೆ ಬಳಿ ಡೈವರ್ಶನ್, ಚರಂಡಿ ಹೂಳು, ತ್ಯಾಜ್ಯ ನೀರು ಹೊಳೆಗೆ ಬಿಡುವುದು ಸೇರಿದಂತೆ ಇನ್ನಿತರ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು.

Call us

ಸಭೆ ಆರಂಭದಲ್ಲಿ ಕುಂದಾಪುರ ಪುರಸಭೆ ನಾಮನಿರ್ದೇಶಕ ಸದಸ್ಯರಾಗಿ ಆಯ್ಕೆಯಾದ ನಾಗರಾಜ ಕಾಂಚನ್, ಪುಷ್ಪಾ ಶೇಟ್, ದಿವಾಕರ ಪೂಜಾರಿ, ಪ್ರಕಾಶ್ ಖಾರ್ವಿ ಹಾಗೂ ರತ್ನಾಕರ ಶೇರೆಗಾರ್ ಅವರಿಗೆ ಪುರಸಭೆ ಅಧ್ಯಕ್ಷ ವೀಣಾ ಭಾಸ್ಕರ ಮೆಂಡನ್ ಪ್ರಮಾಣ ವಚನ ಭೋದಿಸಿದರು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Leave a Reply

Your email address will not be published. Required fields are marked *

17 − 9 =