ಮೂಡಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ನಡೆದ ಶತಮಾನದ ನಮನ ವಿಶೇಶೋಪನ್ಯಾಸದಲ್ಲಿ ಡಾ. ದೇ ಜವರೇಗೌಡರ ಕುರಿತು ಕನ್ನಡ ಪ್ರಾಧ್ಯಪಕ ಹಾಗೂ ಪ್ರಾಚಾರ್ಯರಾದ ಡಾ. ಸಿ. ಪಿ ಕೃಷ್ಣ ಕುಮಾರ್ ಮಾತನಾಡಿದರು.
ಕನ್ನಡದ ಶತಪುರುಷರೆಂದೇ ಹೆಸರಾಗಿರುವ ಇವರು ಚೆನ್ನರಾಯ ಪಟ್ಟಣದ ಒಂದು ಕುಗ್ರಾಮದವರು. ತಮ್ಮ ವೈಯಕ್ತಿಕ ಜೀವನ ಹೋರಾಟದ ನಡುವೆಯೂ ಕನ್ನಡ ಪರವಾದ ಪ್ರಬಲ ಹೋರಾಟರಾಗಿ ಗುರುತಿಸಿಕೊಂಡವರು. ಉತ್ತಮ ಆಡಳಿತಗಾರ, ಶಿಕ್ಷಣತಜ್ಙ, ಸಾಹಿತಿ ಹಾಗೂ ಕನ್ನಡಪರ ಹೋರಾಟಗಾರ, ಅತ್ಯಂತ ಕ್ರೀಯಾಶೀಲ ವ್ಯಕ್ತಿಯಾಗಿದ್ದ ಜವರೇಗೌಡರು ಕನ್ನಡಕ್ಕೆ ಶ್ರೇಷ್ಠ ಸ್ಥಾನಮಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಆಳ್ವಾಸ್ ಪದವಿ ಕಾಲೇಜಿನ ಪದವಿ ವಿಬಾಗದ ಟಿ. ಎನ್. ಎ. ಖಂಡಿಗೆ ನಿರೂಪಿಸಿದರು.