ಕನ್ನಡವೇ ಕನ್ನಡಿಗರ ಜೀವನಾಡಿ: ಸತೀಶ್ ನಾಯ್ಕ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು ಎಂದು ಕವಿ ಕುವೆಂಪು ಕನ್ನಡದ ಭಾಷೆಯ ಮಹತ್ವವನ್ನು ಸಾರಿದ್ದಾರೆ. ಕನ್ನಡಿಗರಾದ ನಾವುಗಳು ಕನ್ನಡ ಭಾಷೆಯ ಉಳಿವು ಮತ್ತು ಬೆಳೆಸುವುದಕ್ಕೆ ಪಣ ತೊಟ್ಟು ಕನ್ನಡವನ್ನು ಪ್ರಪಂಚ ಉದ್ದಗಲಕ್ಕೂ ಪಸರಿಸುವ ಕೆಲಸವಾಗಬೇಕು, ಕನ್ನಡ ನಮ್ಮ ದಿನ ನಿತ್ಯ ಮಾತನಾಡುವ ಭಾಷೆಯಾಗಿರದೇ ನಮ್ಮ ಎಲ್ಲಾ ಕಾಯಕದಲ್ಲೂ ಬಳಸಿಕೊಳ್ಳಬೇಕು, ಕನ್ನಡವೇ ಕನ್ನಡಿಗರ ಜೀವನಾಡಿಯಾಗಿದೆ ಎಂದು ಮಹಾತ್ಮ ಗಾಂಧಿ ಫ್ರೌಡಶಾಲೆಯ ಮುಖ್ಯೋಪಾಧ್ಯಯರಾದ ಸತೀಶ್ ನಾಯ್ಕ ಅವರು ಹೇಳಿದರು.

Call us

Click Here

Click here

Click Here

Call us

Visit Now

Click here

ಅವರು ಮಹಾತ್ಮ ಗಾಂಧಿ ಫ್ರೌಡಶಾಲೆ ಸಾಬ್ರಕಟ್ಟೆ , ಶ್ರೀವಿನಾಯಕ ಯುವಕ ಮಂಡಲ ಸಾಬ್ರಕಟ್ಟೆ – ಯಡ್ತಾಡಿ ಇವರ ಸಹಯೋಗದಲ್ಲಿ ನಡೆದ ಮಾತಾಡ್ ಮಾತಾಡ್ ಕನ್ನಡ – ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರವನ್ನು ಶ್ರೀ ವಿನಾಯಕ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ದೇವಾಡಿಗ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆ ಹಾಗೂ ಕನ್ನಡ ನಾಡು ನುಡಿಯ ರಕ್ಷಣೆ ಸಂಕಲ್ಪವನ್ನು ಶಿಕ್ಷಕ ಗಣೇಶ್ ನಾಯಕ್ ಶಿರಿಯಾರ ಅವರು ನೇರವೆರಿಸಿದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಕಾರ್ಯದರ್ಶಿ ಪ್ರಭಾಕರ ಪೂಜಾರಿ, ಮೆಟ್ರಿಕ್ ಪೂರ್ವ ಬಾಲಕಿರ ವಸತಿ ನಿಲಯದ ಮೇಲ್ವಿಚಾರಕಿ ಜಯಂತಿ, ಶಾಲೆಯ ಹಳೆ ವಿದ್ಯಾರ್ಥಿ ತೇಜ ನಾಯ್ಕ, ಶಾಲೆಯ ಅಧ್ಯಾಪಕ ವೃಂದ, ಯುವಕ ಮಂಡಲದ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

three × 5 =