ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನವರಿ 2019 ರಿಂದ ಡಿಸೆಂಬರ್ 2019 ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ, ವಿವಿಧ ಬಹುಮಾನಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಯ್ಕೆಯಾದ ಕೃತಿಗಳ ಪ್ರಕಾಶಕರು/ ಮುದ್ರಕರು/ ಕಲಾವಿದರಿಗೆ ಕನ್ನಡ ಪುಸ್ತಕ ಸೊಗಸು -2019 ಬಹುಮಾನವನ್ನು ನೀಡಲಾಗುವುದು.
ಆಸಕ್ತ ಪ್ರಕಾಶಕರು/ ಮುದ್ರಕರು/ ಕಲಾವಿದರು/ ಲೇಖಕರುಗಳು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ. ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು/ ಚಿತ್ರ ಕಲಾವಿದರ ಪೂರ್ಣ ವಿಳಾಸ ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಏಪ್ರಿಲ್ 4 ರ ಒಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಬೆಂಗಳೂರು ಇಲ್ಲಿಗೆ ಕಳುಹಿಸಬೇಕು. ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಬೆಂಗಳೂರು, ವೆಬ್‌ಸೈಟ್ www.kannadapustakapradhikara.com, ದೂರವಾಣಿ ಸಂಖ್ಯೆ: 080-22484516/ 22107704 ಅನ್ನು ಸಂಪರ್ಕಿಸುವಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳ ಪ್ರಕಟಣೆ ತಿಳಿಸಿದೆ.