ಕನ್ನಡ ಸವಿಯುವುದೇ ನಾಡಿಗೆ ಸಲ್ಲಿಸುವ ಸೇವೆ: ಮೋಹನ್‌ದಾಸ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಬೇಕಾಗಿರುವುದು ಕನ್ನಡಿಗರಾದ ನಮ್ಮ ಕರ್ತವ್ಯವಾಗಿದೆ. ವರ್ಷದುದ್ದಕ್ಕೂ ಮಾತ್ರವಲ್ಲ, ಜೀವನದುದ್ದಕ್ಕೂ ಕನ್ನಡವನ್ನು ನಾವು ಅನುಭವಿಸುತ್ತಾ, ಅದರ ಸವಿಯನ್ನು ಸವಿಯುವುದು ನಾವು ನಾಡಿಗೆ ಸಲ್ಲಿಸುವ ಅತೀ ದೊಡ್ಡ ಸೇವೆಯಾಗಿದೆ ಎಂದು ಮೊಳಹಳ್ಳಿ-ಹುಣ್ಸೆಮಕ್ಕಿ ಶಿವಶಾಂತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮೋಹನ್‌ದಾಸ್ ಶೆಟ್ಟಿ ಹೇಳಿದರು.

ಅವರು ಬಿದ್ಕಲ್‌ಕಟ್ಟೆಯಲ್ಲಿ ಕಳೆದ ೧೪ ವರ್ಷಗಳಿಂದ ಸ್ಥಳೀಯ ಕನ್ನಡ ರಾಜ್ಯೋತ್ಸವ ಸಮಿತಿ ಏರ್ಪಡಿಸಿಕೊಂಡು ಬರುತ್ತಿರುವ ಕನ್ನಡ ದಿನಾಚರಣೆಯ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ದೀನಪಾಲ ಶೆಟ್ಟಿ, ಸಂಘಟಕರಾದ ವಿಶ್ವನಾಥ ಶೆಟ್ಟಿ, ಸ್ಥಳೀಯ ಉದ್ಯಮಿ ಹಾಗೂ ಇನ್ನೀರ್ವ ಮುಖ್ಯ ಅತಿಥಿಗಳಾದ ಶಂಕರ ಹೆಗ್ಡೆ, ಕಾರ್ಯದರ್ಶಿ ಉದಯಕುಮಾರ ಶೆಟ್ಟಿ, ಕಾಳಾವರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

eighteen − 14 =