ಕಮರಿಗೆ ಉರುಳಿದ ಮೀನು ಲಾರಿ

Call us

ತ್ರಾಸಿ: ಗಂಗೊಳ್ಳಿಯಿಂದ ಮದ್ರಾಸಿಗೆ ತೆರಳಬೇಕಿದ್ದ ಮೀನು ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಮರಿಗೆ ಉರುಳಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಕಡಲ ಕಿನಾರೆಯ ಬಳಿ ಸಂಭವಿಸಿದೆ.

Call us

ಗಂಗೊಳ್ಳಿಯಿಂದ ಮದ್ರಾಸಿಗೆ ತೆರಳಲು ಬೆಳಿಗ್ಗೆ 6ಗಂಟೆಯ ಸುಮಾರಿಗೆ ಲೋಡ್ ಮಾಡಿ ಹೊರಟಿದ್ದ ಮೀನು ಲಾರಿಯು ಮದ್ರಾಸಿಗೆ ಕುಂದಾಪುರ ಮಾರ್ಗವಾಗಿ ತೆರಳಬೇಕಿತ್ತು. ಬದಲಿ ಚಾಲಕನನ್ನು ಕರೆತರುವ ಸಲುವಾಗಿ ಮರವಂತೆ ಮಾರ್ಗವಾಗಿ ಲಾರಿಯನ್ನು ತರಲಾಗಿತ್ತು ಎನ್ನಲಾಗಿದ್ದು ದುರದೃಷ್ಟವಷಾತ್ ಈ ಅವಘಡ ಸಂಭವಿಸಿದೆ. ಲಾರಿ ಪಲ್ಟಿಯಾಗಿ ಕಮರಿಗೆ ಬಿದ್ದಿತ್ತು.  ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗಂಗೊಳ್ಳಿಯ ಮಹೇಶ್‌ ಅವರಿಗೆ ಸೇರಿದ ಮೀನು ಲಾರಿಯನ್ನು ಸಂಜೆಯ ವೇಳೆಗೆ ಎರಡು ಕ್ರೇನ್ ಬಳಸಿ ಮೇಲೆತ್ತಲಾಯಿತು

Leave a Reply

Your email address will not be published. Required fields are marked *

10 + seven =