ಕರಾವಳಿಯ ಪ್ರಸಿದ್ಧ ಕೊಡಿಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ

Call us

Call us

ಕುಂದಾಪುರ: ಊರ ಅಭಿವೃದ್ಧಿ ಮತ್ತು ಲೋಕಕಲ್ಯಾಣಾರ್ಥವಾಗಿ ಊರ ಜಾತ್ರೆಯನ್ನು ನಡೆಸಬೇಕು. ಐತಿಹಾಸಿಕ ಜಾತ್ರೆ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕೊಡಿಹಬ್ಬ ಕರಾವಳಿ ಜಿಲ್ಲೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಪುನರುತ್ಥಾನಕ್ಕೆ ಹೊಸ ಆಯಾಮ ನೀಡಿದೆ. ಇಂತಹ ಮಹತ್ವದ ಬಹು ದೊಡ್ಡ ಹಬ್ಬವನ್ನು ಸಾಂಗವಾಗಿ ನೆರವೇರಿಸುವಲ್ಲಿ ಸರ್ವಧರ್ಮದವರ ಸಹಭಾಗಿತ್ವ ಮತ್ತು ಸಹಕಾರ ಅವಶ್ಯಕವಾಗಿದೆ ಎಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಾಲಯ ಪ್ರಧಾನ ಅರ್ಚಕ ಪ್ರಸನ್ನ ಕುಮಾರ ಐತಾಳ ಹೇಳಿದರು.

Call us

Call us

Visit Now

ಅವರು ಕೋಟೇಶ್ವರ ಕೋಡಿಹಬ್ಬದ ಆಹ್ವಾನ ಪತ್ರಿಕೆ ದೇವಳ ವಠಾರದಲ್ಲಿ ಬಿಡುಗಡೆ ಮಾಡಿ, ಮಾತನಾಡಿದರು. ಕೊಡಿಹಬ್ಬದ ಪೂರ್ವಭಾವಿ ತಯಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ದೇವಾಲಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್ ಆಗಮೋಕ್ತ ಪೂಜೆ, ವಿಧಿ ವಿಧಾನಗಳು, ಇಲಾಖೆ ಸಹಕಾರದ ಬಗ್ಗೆ ವಿವರಿಸಿದರು.

Click here

Call us

Call us

ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಮಾತನಾಡಿ ನಾನಾ ಕಡೆಗಳಿಂದ ಜಾತ್ರೆಗೆ ಆಗಮಿಸುವ ವಾಹನಗಳಿಗೆ ನಗರ ಪ್ರವೇಶದ ಉತ್ತರ ಮತ್ತು ದಕ್ಷಿಣ ವೈ ಜಂಕ್ಷನ್‌ಗಳಲ್ಲಿ ಹಾಗೂ ಹಾಲಾಡಿ ಜಂಕ್ಷನ್ ನಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಹೊರ ಠಾಣೆಗಳನ್ನು ಮಾಡಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗುವುದು. ಧ್ವನಿವರ್ಧಕಗಳ ಮೂಲಕ ಭದ್ರತಾ ಸಂದೇಶಗಳನ್ನು ಬಿತ್ತರಿಸಲಾಗುವುದು. ಮಹಿಳೆಯರು, ಮಕ್ಕಳ ಬಗ್ಗೆ ಪೋಷಕರು ಜಾಗೃತರಾಗಿರಬೇಕು. ಬ್ಯಾನರ್‌ಗಳನ್ನು ಅಳವಡಿಸುವ ಮುನ್ನ ಪೊಲೀಸರಿಗೆ ತಿಳಿಸಬೇಕು ಎಂದರು.

ಆರೋಗ್ಯಾಧಿಕಾರಿ ರಮೇಶ್ ಶೆಟ್ಟಿ, ಅಗ್ನಿಶಾಮಕ ಠಾಣಾಧಿಕಾರಿ ಭರತ್ ಕುಮಾರ್, ಮೆಸ್ಕಾಂ ಅಧಿಕಾರಿ ಸುರೇಶ್ ಪ್ರಭು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಾಸೀರ್ ಹುಸೇನ್, ಕುಂದಾಪುರ ಪುರಸಭಾ ಉಪಾಧ್ಯಕ್ಷ ನಾಗರಾಜ ಕಾಮದೇನು, ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಎಂ. ಗುರುರಾಜ ರಾವ್, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಬಿಲ್ಲವ, ಶ್ರೀ ಪಟ್ಟಾಭಿ ರಾಮಚಂದ್ರ ದೇವಾಲಯದ ಆಡಳಿತ ಮೊಕ್ತೇಸರ ಶ್ರೀಧರ ಕಾಮತ್, ಯುವ ಮುಂದಾಳು ಶಂಕರ ಅಂಕದಕಟ್ಟೆ, ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ದೇವೇಂದ್ರ, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಲಹೆ-ಸೂಚನೆಗಳನ್ನು ನೀಡಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಹಬ್ಬದ ತಯಾರಿಗಳ ವಿವರ ನೀಡಿದರು. ಸಮಿತಿ ಸದಸ್ಯರಾದ ಶ್ರೀನಿವಾಸ ಕುಂದರ್, ವಿನೋದ್ ಶೇಟ್, ಕುಸುಮ ದೇವಾಡಿಗ, ವನಜ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉದಯ ನಾಯಕ್, ದೇವಳ ಸಮಿತಿ ನಿಕಟಪೂರ್ವ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಊರ ಗಣ್ಯರು ಉಪಸ್ಥಿತರಿದ್ಧರು. ಕೆ.ಜಿ.ವೈದ್ಯ ಪ್ರಾರ್ಥಿಸಿದರು. ಬಿ.ಎಂ.ಗುರುರಾಜ ರಾವ್ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

8 + 17 =