ಕರಾವಳಿ ಕುಲಾಲ ಯುವ ವೇದಿಕೆ ವಕ್ವಾಡಿ ಘಟಕ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೀಳರಿಮೆಯನ್ನು ಬಿಟ್ಟು ಸ್ವಪ್ರಯತ್ನದಿಂದ ಮುಂದೆ ಬಂದು ಸಮಾಜ ಸೇವಾ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ನಮ್ಮ ಏಳಿಗೆಯ ಜೊತೆಗೆ ಎಲ್ಲರ ಏಳಿಗೆ ಸಾಧಿಸಿದಾಗ ನಿಮ್ಮ ಶಕ್ತಿ ಉನ್ನತ ಮಟ್ಟದಲ್ಲಿ ಬೆಳೆದು ಸಮಾಜ ಬೆಳೆಯಲು ಸಾದ್ಯ ಎಂದು ಕುಂದಾಪುರ ಕುಲಾಲ ಸಂಘದ ಗೌರವಾಧ್ಯಕ್ಷ ಡಾ.ಎಂ.ವಿ.ಕುಲಾಲ ಹೇಳಿದರು.

ಅವರು ವಕ್ವಾಡಿ ಮಗದಬೆಟ್ಟು ಮೈದಾನದಲ್ಲಿ ನಡೆದ ಕರಾವಳಿ ಕುಲಾಲ ಯುವ ವೇದಿಕೆ ವಕ್ವಾಡಿ ಘಟಕ ಉದ್ಘಾಟಿಸಿ ಮಾತನಾಡಿದರು. ನೂತನ ವೇದಿಕೆಯ ಅಧ್ಯಕ್ಷ ವಕ್ವಾಡಿ ನರಸಿಂಹ ಕುಲಾಲ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಕರಾವಳಿ ಕುಲಾಲ ಯುವ ವೇದಿಕೆ ಸ್ಥಾಪಕಾಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ ದಿಕ್ಸೂಚಿ ಬಾಷಣ ಮಾಡಿದರು. ವೇದಿಕೆಯಲ್ಲಿ ಕುಂದಾಪುರ ಕುಲಾಲ ಸಂಘದ ಅಧ್ಯಕ್ಷ ನಿರಂಜನ ಕುಲಾಲ, ಕರ್ನಾಟಕ ರಾಜ್ಯ ಕುಂಬಾರ ಸಂಘದ ಅಧ್ಯಕ್ಷ ರಾಮ ಕುಲಾಲ ಪಕ್ಕಾಲು, ಕರ್ನಾಟಕ ರಾಜ್ಯ ಕುಂಬಾರ ಸಂಘದ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಸುನೀಲ್.ಎಸ್ ಮೂಲ್ಯ, ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ ಜಿಲ್ಲಾದ್ಯಕ್ಷ ಸತೀಶ್ ಕುಲಾಲ ನಡೂರು, ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ, ಕೋಟೇಶ್ವರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತೇಜ ಕುಲಾಲ, ಜಿಲ್ಲಾ ಪಂಚಾಯಿತಿ ಸದಸ್ಯ ಸುಪ್ರೀತಾ ಕುಲಾಲ, ಮೊಳಹಳ್ಳಿ ಗ್ರಾ.ಪಂ ಅಧ್ಯಕ್ಷ ಉದಯ ಕುಲಾಲ, ಗಂಗೆ ಕುಲಾಲ, ದಿನೇಶ್ ಕುಲಾಲ, ಸಂತೋಷ ಕುಲಾಲ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುಪ್ರೀತಾ ಕುಲಾಲ, ಡಾ, ಸಂತೋಷ ಕುಲಾಲ ಅವರನ್ನು ಸನ್ಮಾನಿಸಲಾಯಿತು. ಸುಚಿತ್ರ ಬಸವ ಕುಲಾಲ ಸ್ವಾಗತಿಸಿದರು. ರವಿಚಂದ್ರ ಕುಲಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಕುಲಾಲ ನಿರೂಪಿಸಿದರು. ಅರುಣ ಕುಲಾಲ ವಂದಿಸಿದರು.

Leave a Reply

Your email address will not be published. Required fields are marked *

14 − six =