ಕರಾವಳಿ ವಲಯ ನಿರ್ವಹಣಾ ಯೋಜನೆ ಕರಡು ನಕಾಶೆ: ಆಕ್ಷೇಪಣೆ ಸಲ್ಲಿಸಲು ಅವಕಾಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಕರಾವಳಿ ನಿಯಂತ್ರಣ ವಲಯ(CRZ) ಅಧಿಸೂಚನೆಯಂತೆ National Centre for Sustainable Coastal Management (NCSCM), ಚೆನ್ನೈ, ಸಂಸ್ಥೆಯು ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ (CZMP) ಕರಡು ನಕಾಶೆಯನ್ನು ತಯಾರಿಸಿರುತ್ತದೆ.

ಆದರಂತೆ ಸದರಿ ಕರ್ನಾಟಕ ರಾಜ್ಯ ಕಡಲತೀರ ವಲಯ, ನಿರ್ವಹಣಾ ಯೋಜನ ಕರಡು ನಕಾಶೆಯನ್ನು ಸಾರ್ವಜನಿಕರು ಪರಿಶೀಲಿಸಿ , ತಕರಾರುಗಳು, ಸಲಹೆಗಳು ಮತ್ತು ಅನಿಸಿಕೆಗಳೇನಾದರೂ ಇದ್ದಲ್ಲಿ,, ಪ್ರಾದೇಶಿಕ ನಿರ್ದೇಶಕರು (ಪರಿಸರ) ಉಡುಪಿ ರವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಕರ್ನಾಟಕ ರಾಜ್ಯ ಕಡಲತೀರ ವಲಯ, ನಿರ್ವಹಣಾ ಯೋಜನೆ ಕುರಿತ ಸರ್ಕಾರದ ಅಧಿಸೂಚನೆಗಳು ಹಾಗೂ ಕರಡು CZMP ನಕಾಶೆಯನ್ನು, ಜಿಲ್ಲೆಯ ಸಂಬಂಧಪಟ್ಟ ತಹಶೀಲ್ದಾರರು, ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಪಂಚಾಯತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಛೇರಿಯಲ್ಲಿ ವೀಕ್ಷಿಸಬಹುದಾಗಿದೆ.

Leave a Reply

Your email address will not be published. Required fields are marked *

4 × 1 =