ಕರ್ನಾಟಕ ಮುಸ್ಲಿಂ ಜಮಾಅತ್: ಬೈಂದೂರು ತಾಲ್ಲೂಕು ಸಮಿತಿ ಅಸ್ತಿತ್ವಕ್ಕೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕರ್ನಾಟಕ ಮುಸ್ಲಿಂ ಜಮಾಅತ್‌ನ ಬೈಂದೂರು ತಾಲ್ಲೂಕು ಸಮಿತಿ ಘೋಷಣಾ ಸಮಾವೇಶವು ನಾವುಂದ ಬುಸ್ತಾನುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಸೋಮವಾರ ನಡೆಯಿತು.

Call us

ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಎಫ್. ರಫೀಖ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮುದರ್ರಿಸ್ ಅಬ್ದುಲ್ ಲತೀಫ್ ಅಲ್ ಫಾಳಿಲಿ ಸಮಾವೇಶವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ. ಬಿ. ಸಿ. ಬಶೀರ್ ಅಲಿ ಮೂಳೂರು ವಿಷಯ ಮಂಡಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರೂ, ಜಿಲ್ಲಾ ಕಾರ್ಯದರ್ಶಿಯೂ ಆದ ಕೆ. ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಾಸ್ತಾವಿಕ ಭಾಷಣ ಮಾಡಿದರು. ಬಳಿಕ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ಬೈಂದೂರು ತಾಲ್ಲೂಕು ಸಮಿತಿಯ ಆಯ್ಕೆ ಪ್ರಕ್ರಿಯೆಯ ನೇತೃತ್ವ ವಹಿಸಿ ನೂತನ ಸಮಿತಿಯನ್ನು ಘೋಷಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಇಲ್ಯಾಸ್ ನಾವುಂದ ಸ್ವಾಗತಿಸಿ, ವಂದಿಸಿದರು.

Call us

ಸಮಾವೇಶದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಜಿಲ್ಲಾ ಕಾರ್ಯದರ್ಶಿ ಕೆ. ಎಸ್. ಎಂ. ಮನ್ಸೂರು ಉಡುಪಿ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷ ಕೊಂಬಾಳಿ ಝುಹುರಿ, ಎಸ್ಸೆಸ್ಸೆಫ್ ಬೈಂದೂರು ಡಿವಿಷನ್ ಅಧ್ಯಕ್ಷ ಎಸ್. ಎಂ. ಹನೀಫ್ ಸಅದಿ, ಜಿಲ್ಲಾ ಸಂಯುಕ್ತ ಜಮಾಅತ್ ನಾಯಕರಾದ ಎಚ್. ಶಹಬಾನ್ ಹಂಗಳೂರು, ಅಬ್ದುಲ್ ಖಾದರ್ ಬಡಾಕರೆ, ಎಸ್. ವೈ. ಎಸ್ ನಾವುಂದ ಸೆಂಟರ್ ಅಧ್ಯಕ್ಷ ರಮಳಾನ್ ಆಕಳಬೈಲು, ಬೈಂದೂರು ಜಾಮಿಯಾ ಮಸೀದಿ ಅಧ್ಯಕ್ಷ ಸಿ.ಎ.ಸಾಹೇಬ್, ಕಾರವಾರ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಫಾರೂಕ್ ಸಾಬ್, ಜಿಲ್ಲಾ ಎಸ್. ವೈ. ಎಸ್ ಕಾರ್ಯದರ್ಶಿ ಇಬ್ರಾಹಿಂ ಮಾಣಿಕೊಳಲು ಹಾಗೂ ಉಲಮಾ ಉಮರಾ ನಾಯಕರು ಇದ್ದರು.

ಬೈಂದೂರು ತಾಲ್ಲೂಕು ನೂತನ ಸಮಿತಿಯ ಪದಾಧಿಕಾರಿಗಳು:
ಅಧ್ಯಕ್ಷ-ಮನ್ಸೂರ್ ಇಬ್ರಾಹಿಂ ಮರವಂತೆ, ಪ್ರಧಾನ ಕಾರ್ಯದರ್ಶಿ–ಫಹೀಮ್ ಶಿರೂರು, ಕೋಶಾಧಿಕಾರಿ- ಜಾಫರ್ ಸಾಬ್ ಬೈಂದೂರು, ಸಂಘಟನಾ ಕಾರ್ಯದರ್ಶಿ-ಕೆ.ಎಂ.ಎಚ್. ಝುಹುರಿ ಕೋಯನಗರ, ಉಪಾಧ್ಯಕ್ಷರು-ಸಿದ್ದೀಕ್ ಸಾಬ್ ಶಿರೂರು, ಸುಲೈಮಾನ್ ಚಾತನಕೆರೆ, ಹುಸೈನ್ ಬೈಂದೂರು, ಅಹ್ಮದ್ ನಾವುಂದ, ಕಾರ್ಯದರ್ಶಿಗಳು-ಇರ್ಷಾದ್ ಕೋಯನಗರ, ಅಬ್ದುಲ್ ಖಾದರ್ ಬಡಾಕರೆ, ಖಾಸಿಂ ಉಪ್ಪುಂದ, ಸುಲ್ತಾನ್ ಬೈಂದೂರು, ಕಾರ್ಯಕಾರಿ ಸಮಿತಿ ಸದಸ್ಯರು-ಇಲ್ಯಾಸ್ ನಾವುಂದ, ಎಸ್. ಜೆ. ಬಿ. ಕೋಯ, ರಫೀಖ್ ಮರವಂತೆ, ಅಬ್ದುಸ್ಸಲಾಂ ನಾವುಂದ, ಅಬ್ದುಲ್ ಹಮೀದ್ ಬಡಾಕೆರೆ, ಅಬ್ಬಾಸ್ ಮಾಣಿಕೊಳಲು, ಬಶೀರ್ ಶಿರೂರು, ರಮಳಾನ್ ಆಕಳಬೈಲು, ಸುಲೈಮಾನ್ ಬಡಾಕೆರೆ, ಹಂಝ ಆಕಳಬೈಲು, ಶಾಜಹಾನ್ ಚಾತನಕೆರೆ, ಮೊಯಿದೀನ್ ನಾವುಂದ, ಫೈಝಲ್ ಬೈಂದೂರು. ಸಮಿತಿಯ ಗೌರವ ಸಲಹೆಗಾರಾಗಿ ಅಬ್ದುಲ್ ಲತೀಫ್ ಅಲ್ ಫಾಳಿಲಿ ನಾವುಂದ, ತೌಫೀಕ್ ಎನ್. ಅಬ್ದುಲ್ಲಾ ಹಾಜಿ ನಾವುಂದ, ಅಬ್ದುಲ್ ಹಮೀದ್ ಹಾಜಿ ಬಡಾಕೆರೆ, ಹಸೈನಾರ್ ಮುಸ್ಲಿಯಾರ್ ಕೋಯನಗರ, ಸಯ್ಯದ್ ಅಜ್ಮಲ್ ಶಿರೂರು, ಅಬ್ದುಲ್ ಗಫೂರು ಶಿರೂರು ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

eighteen − 4 =