ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್: ಕೋಟೇಶ್ವರ ವಲಯ ಸಮಿತಿಯ 21ನೇ ವಾರ್ಷಿಕಾಧಿವೇಶನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರ
ಮ ಜೀವಿಗಳಾದ ಟೈಲರ್‌ಗಳನ್ನು ಸರ್ಕಾರ ಗುರುತಿಸಿದೆ. ಆದರೆ, ಸರ್ಕಾರದ ಸೌಲಭ್ಯಗಳು ಯಾವುದೂ ಟೈಲರ್‌ಗಳಿಗೆ ಸಿಗುತ್ತಿಲ್ಲ. ಇದಕ್ಕೆಲ್ಲಾ ಕಾರಣವೆಂದರೇ ನಮ್ಮ ಸಂಘಟನೆ ಸಶಕ್ತವಾಗಿಲ್ಲ. ಆದ್ದುದರಿಂದ ರಾಜ್ಯ ಟೈಲರ್ ಅಸೋಸಿಯೇಷನ್ ಸಂಘಟನಾತ್ಮಕವಾಗಿ ಬಲಗೊಳ್ಳುವುದು ಇಂದಿನ ದಿನದಲ್ಲಿ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್‌ನ ಉಡುಪಿ ಜಿಲ್ಲಾಧ್ಯಕ್ಷ ಗುರುರಾಜ ಶೆಟ್ಟಿ ಹೇಳಿದರು.

Call us

Call us

Call us

ಅವರು ಕೋಟೇಶ್ವರದ ಶಾರದಾ ಕಲ್ಯಾಣ ಮಂಟಪದಲ್ಲಿ ಜರುಗಿದ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಕೋಟೇಶ್ವರ ವಲಯ ಸಮಿತಿಯ ೨೧ನೇ ವಾರ್ಷಿಕಾಧಿವೇಶನ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದರು.

Call us

Call us

ರಾಜ್ಯ ಸಮಿತಿ ಕೋಶಾಧಿಕಾರಿ ಕೆ.ರಾಮಚಂದ್ರ ಮಾತನಾಡಿ, ಈ ಸಂಘಟನೆ ಟೈಲರ್‌ಗಳ ಅಭ್ಯುದಯಕ್ಕಾಗಿದೆ. ಆದ್ದರಿಂದ ಅಸೋಸಿಯೇಷನ್‌ಗೆ ಸೇರಲು ಯಾರ ಒತ್ತಾಯದ ಅವಶ್ಯಕತೆಯಿಲ್ಲ. ನಮ್ಮ ಸಂಘಟನೆ ಬಲಗೊಂಡರೆ ನಮ್ಮ ಭವಿಷ್ಯ ಉಜ್ವಲವಾಗುತ್ತದೆ. ಶೀಘ್ರ ರಾಜ್ಯ ಸಮಿತಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸುತ್ತದೆ. ಎಲ್ಲ ಕ್ಷೇತ್ರ, ವಲಯ ಸಮಿತಿಗಳು ಸಹಕರಿಸಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

ಕೋಟೇಶ್ವರ ವಲಯಾಅಧ್ಯಕ್ಷ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ವಲಯ ಸಮಿತಿ ಸ್ಥಾಪಕಾಧ್ಯಕ್ಷ ರತ್ನಾಕರ, ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಪಾಲನ್, ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೀವ ಆರ್. ಪೂಜಾರಿ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಹೇಮಾ, ಕುಂದಾಪುರ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಸುಧಾಕರ ಎಂ., ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ಮದುಸೂಧನ್ ಆಚಾರ್, ವಿವಿಧ ವಲಯ, ಕ್ಷೇತ್ರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ಟೈಲರ್‌ಗಳಾದ ಭಾಷಾ ಕೋಟೇಶ್ವರ, ಪುಂಡಲೀಕ ಕಿಣಿ ಕೋಟೇಶ್ವರ, ಅಸ್ಸಿ ಕುಟ್ಟಿ ಜಾನ್ ಕೆದೂರು ಮತ್ತು ಜನಾರ್ದನ ಆಚಾರ್ಯ ತೆಕ್ಕಟ್ಟೆ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕೋಟೇಶ್ವರ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಪ್ರೇಮಾ ಶೆಟ್ಟಿಗಾರ್ ಪ್ರಾರ್ಥಿಸಿದರು. ದಿನೇಶ್ ಸ್ವಾಗತಿಸಿ, ವರದಿ ವಾಚಿಸಿದರು. ಆಶಾ ಗೋಪಾಡಿ ಆಯ-ವ್ಯಯ ವರದಿ ಮಂಡಿಸಿದರು. ಶ್ರೀಧರ ಬಳೆಗಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

15 − 10 =