ಕರ್ನಾಟಕ ಸಂಘ ಮುಂಬಯಿ ಹೊರರಾಜ್ಯ ನಾಟಕೋತ್ಸವಕ್ಕೆ ಚಾಲನೆ

Call us

ಮುಂಬಯಿ: ಹೊರರಾಜ್ಯದಲ್ಲಿ ಇಂದು ಜರಗುತ್ತಿರುವ ನಾಟಕೋತ್ಸವವನ್ನು ಉದ್ಘಾಟಿಸಲು ಅಭಿಮಾನವಾಗುತ್ತಿದೆ. ಹೊರನಾಡಿನಲ್ಲಿ ನಿರಂತರ ಕನ್ನಡ ನುಡಿ ಸೇವೆಗೈಯುವ ಕರ್ನಾಟಕ ಸಂಘವು ಇಂದಿನ ನಾಟಕೋತ್ಸವವನ್ನು ಆಯೋಜಿಸಿರುವುದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷನಾಗಿ ನನಗೆ ಅತ್ಯಂತ ಸಂತೋಷವಾಗಿದೆ. ಸಂಸ್ಕƒತಿ, ಕಲೆ, ನಾಟಕಗಳು ಜೀವನದ ತಪ್ಪು ಒಪ್ಪುಗಳನ್ನು ತಿದ್ದಲು ಸಹಕಾರಿಯಾಗುತ್ತದೆ. ರಂಗಭೂಮಿ, ಸಂಸ್ಕƒತಿ ಬಗ್ಗೆ ಎಲ್ಲರಲ್ಲೂ ಶ್ರದ್ಧೆ ಇರಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಎಲ್‌. ಬಿ. ಶೇಖ್‌ (ಮಾಸ್ತರು) ನುಡಿದರು.

ಎ. 2 ರಂದು ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗƒಹದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕƒತಿ ಇಲಾಖೆ ಹಾಗೂ ಕರ್ನಾಟಕ ಸಂಘದ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಆಯೋಜಿಸಿದ ಹೊರರಾಜ್ಯ ನಾಟಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಜೀವನದಲ್ಲಿ ಎಲ್ಲವನ್ನೂ ಕಲಿಸಿಕೊಡುತ್ತದೆ. ಗಾಂಧೀಜಿಯವರು ಕೂಡಾ ಸತ್ಯಹರಿಶ್ಚಂದ್ರ ನಾಟಕದಿಂದ ಪ್ರಭಾವಿತರಾದವರು. ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ಕರ್ನಾಟಕ ಸಂಘದ ನಾಟಕವನ್ನು ಅಯೋಜಿಸಲು ಅವಕಾಶವನ್ನು ಖಂಡಿತ ಮಾಡಿಕೊಡುತ್ತದೆ. ಇದೊಂದು ಒಳ್ಳೆಯ ಕ್ಷಣ ಅಂತ ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ರಂಗಭೂಮಿಗಾಗಿ ಒಟ್ಟಾಗಿ ಕಾರ್ಯ ನಿರ್ವಹಿಸೋಣ ಎಂದು ನುಡಿದು ಸಂಘದ ಕಾರ್ಯಗಳನ್ನು ಪ್ರಶಂಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕ ಬಿ. ಎಂ. ರಾಮಚಂದ್ರ ಮಾತನಾಡಿ, ಇದೊಂದು ನಾಟಕೋತ್ಸವವಾಗಿರದೆ ರಂಗಭೂಮಿಯ ಬಾಂಧವ್ಯದ ಕಾರ್ಯಕ್ರಮವಾಗಿದೆ. ಈ ನಾಟಕೋತ್ಸವದಲ್ಲಿ ರಂಗಭೂಮಿಯ ಅತ್ಯಂತ ಹಿರಿಯರಾದ 80ರ ಹರೆಯದ ಶ್ರೇಷ್ಠ ಕಲಾವಿದರಾದ ನಾಡೋಜ ಬೆಳಗಲ್ಲು ವೀರಣ್ಣ ಹಾಗೂ ನಾಡೋಜ ಸುಭದ್ರಮ್ಮ ಮನ್ಸೂರವರು ಅಭಿನಯಿಸಬೇಕೆಂದು ಅವರನ್ನು ಕಾಡಿ ಬೇಡಿ ಮುಂಬಯಿಗೆ ಕರೊRಂಡು ಬಂದಿದ್ದೇವೆ. ಕರ್ನಾಟಕ ಸಂಘ ಮುಂಬು ಗೌರವಾನಿತ್ವ ಸಂಸ್ಥೆ ಈ ನಾಟಕೋತ್ಸವವನ್ನು ಆಯೋಜಿಸುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂದರು. ಅತಿಥಿಗಳನ್ನು ಕರ್ನಾಟಕ ಸಂಘದ ಅಧ್ಯಕ್ಷ ಪಿ. ಜಿ. ಬುರ್ಡೆ ಹಾಗೂ ಗೌರವ ಕಾರ್ಯದರ್ಶಿ ಓಂದಾಸ್‌ ಕಣ್ಣಂಗಾರ್‌ ಶಾಲು ಹೊದೆಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

Call us

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷರಾದ ಪಿ. ಜಿ. ಬುರ್ಡೆ, ಇಂದಿನ ನಾಟಕೋತ್ಸವದಲ್ಲಿ ಮೂರು ವಿಭಿನ್ನ ನಾಟಕಗಳು ರಂಗ ಪ್ರಯೋಗಗೊಳ್ಳುತ್ತಿರುವುದು ತುಂಬಾ ಖುಷಿಯ ಸಂಗತಿಯಾಗಿದೆ. ನಾಟಕಾಭಿಮಾನಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೇ ಮೂರು ದಿನವೂ ನಾಟಕ ನೋಡುವಂತಾಗಬೇಕು. ಕರ್ನಾಟಕ ಸಂಘವು ಇಂತಹ ಅರ್ಥಪೂರ್ಣ ನಾಟಕೋತ್ಸವವನ್ನು ಆಯೋಜಿಸಲು ನಿರಂತರ ಸಹಕಾರ ನೀಡುತ್ತಾ ಬಂದಿದೆ ಎಂದರು.

ಪಿ. ಜಿ. ಬುರ್ಡೆ ಅವರನ್ನು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಎಲ್‌. ಬಿ. ಶೇಖ್‌(ಮಾಸ್ತರ್‌) ಶಾಲು ಹೊದೆಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್‌ ಸಿದ್ಧರಾಜು ಹಾಗೂ ಸುಪರಿಂಟೆಂಡ್‌ ರಾಜು ಅವರನ್ನು ಶಾಲು ಹೊದೆಸಿ, ಪುಸ್ತಕ ಗೌರವವನ್ನಿತ್ತು ಸಂಘದ ಪದಾಧಿಕಾರಿಗಳು ಗೌರವಿಸಿದರು.

ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯೆ ಕಲ್ಪನಾ ನಾಗನಾಥ್‌ ಪ್ರಾರ್ಥನೆಗೈದರು. ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಓಂದಾಸ್‌ ಕಣ್ಣಂಗಾರ್‌ ಸ್ವಾಗತಿಸಿದರು. ಪ್ರಶಸ್ತಿ ವಿಜೇತ ರಂಗ ನಿರ್ದೇಶಕ ಡಾ| ಭರತ್‌ ಕುಮಾರ್‌ ಪೊಲಿಪು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಭಿನಯ ರಂಗಕೇಂದ್ರ ಕರ್ನಾಟಕ ಬೆಂಗಳೂರು ತಂಡದವರಿಂದ ಮಡಿವಾಳ ಮಾಚಿದೇವ ನಾಟಕ ರಂಗ ಪ್ರಯೋಗಗೊಂಡಿತು.

Leave a Reply

Your email address will not be published. Required fields are marked *

four × one =