ಕಲಾಂ ಆದರ್ಶಗಳನ್ನು ಆಳವಡಿಸಿಕೊಳ್ಳಿ : ನರೇಂದ್ರ ಎಸ್ ಗಂಗೊಳ್ಳಿ

Call us

Call us

Call us

Call us

ಕುಂದಾಪುರ: ಕಲಾಂ ವಿವಿಧ ರಂಗಗಳಲ್ಲಿ ತೋರಿದ ಸಾಧನೆಗಳಿಗಿಂತ ಅವರು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಅತ್ಯುತ್ತಮ ಮಾನವೀಯ ಮೌಲ್ಯಗಳಿಂದಾಗಿ ಎಲ್ಲರ ಹೃದಯಕ್ಕೆ ಹೆಚ್ಚು ಆಪ್ತವಾಗುತ್ತಾರೆ.ಅವರ ಸರಳತೆ ಆದರ್ಶಗಳು ಪ್ರತಿಯೊಬ್ಬರಿಗೂ ಪ್ರೇರೆಪಣೆ ನೀಡುವಂತಾದ್ದು ಎಂದು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.

Call us

Click Here

Click here

Click Here

Call us

Visit Now

Click here

ಅವರು ಇತ್ತೀಚೆಗೆ ಕುಂದಾಪುರದ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಆಶ್ರಯದಲ್ಲಿ ನಡೆದ ಕಲಾಂ ಮತ್ತು ನಾವು ಎನ್ನುವ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಕಲಾಂರಂತಹ ಮಹಾನ್ ವ್ಯಕ್ತಿತ್ವಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳನ್ನು ಮಾಡುವುದರ ಜೊತೆಯಲ್ಲೇ ನಮ್ಮದೇ ಆದ ಒಂದು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವತ್ತ ಪ್ರತಿಯೊಬ್ಬ ವ್ಯಕ್ತಿಯೂ ಕಾರ‍್ಯಶೀಲರಾಗಬೇಕು.ನಮ್ಮ ಧನಾತ್ಮಕ ವಿಭಿನ್ನತೆಗಳ ಮೂಲಕವೇ ಸಮಾಜದಲ್ಲಿ ವ್ಯಕ್ತಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಸೀಮಾ ಪಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೇಂಜರ್ಸ್ ಘಟಕದ ಸಂಯೋಜಕಿ ಕು.ಜ್ಯೋತಿ ಮೊಗವೀರ ಸ್ವಾಗತಿಸಿದರು. ವಿದ್ಯಾರ್ಥಿನಿ ಆಶಾ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು.ವಿದ್ಯಾರ್ಥಿ ಶಿವಪ್ರಸಾದ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು. ರೋವರ್ಸ್ ಘಟಕದ ಸಂಯೋಜಕ ಪ್ರವೀಣ್ ಎಮ್ ಗಂಗೊಳ್ಳಿ ವಂದಿಸಿದರು.

Leave a Reply

Your email address will not be published. Required fields are marked *

five × two =