ಕಲಾ ವೈವಿಧ್ಯತೆಯಿಂದ ಕೂಡಿದ ಜನಸಾಮಾನ್ಯರ ಕಲೆ ಯಕ್ಷಗಾನ: ಕಂದಾವರ ರಘುರಾಮ ಶೆಟ್ಟಿ

Click Here

Call us

Call us

 

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಯಕ್ಷಗಾನ ಕರ್ನಾಟಕದ ಹೆಮ್ಮೆಯ ಕಲೆ. ಸಂಗೀತ, ಸಾಹಿತ್ಯ, ನೃತ್ಯ, ಅಭಿನಯ, ವೇಷಗಾರಿಕೆಗಳಿಂದ ಕೂಡಿದ ಸಮೃದ್ಧ ಕಲೆ. ಯಕ್ಷಗಾನ ಜನಸಾಮಾನ್ಯರ ಕಲೆ. ಅವರಿಗೆ ಮನರಂಜನೆ, ನೀತಿಬೋಧನೆಯನ್ನು ಸಾರುವ ಕಲೆ.ಅವರಿಗೆ ಕಲೆಯ, ಕಲಾವಿದರು, ಕಲಾಪ್ರದರ್ಶನದ ಕುರಿತಾದ ವಿಷಯಗಳನ್ನು ಕುರಿತು ಹೆಚ್ಚೆಚ್ಚು ತಿಳಿಸಬೇಕು ಎಂದು ಕಂದಾವರ ರಘುರಾಮ ಶೆಟ್ಟಿ ಖ್ಯಾತ ಯಕ್ಷಗಾನ ಪ್ರಸಂಗಕರ್ತರು ಅಭಿಪ್ರಾಯಪಟ್ಟರು.

Click here

Click Here

Call us

Call us

ಅವರು ಇಲ್ಲಿನ 23,24ಮತ್ತು 25 ನೇ ಮಾರ್ಚ್ 2018 ರಂದು ಇಲ್ಲಿನ ಭಂಡಾರ್ಕಾರ್ಸ್ಕಾಲೇಜು ಮತ್ತು ಕರ್ನಾಟಕ ಸಾಂಸ್ಕೃತಿಕ ಕಲಾಪ್ರತಿಷ್ಠಾನ ರಿ. ಬೆಂಗಳೂರು ಸಹಯೋಗದಲ್ಲಿ ಕಾಲೇಜಿನಲ್ಲಿ ನಡಯಿತ್ತಿರುವ 13 ನೇ ಅಖಿಲ ಭಾರತ ಯಕ್ಷಗಾನ–ಬಯಲಾಟ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇದು ಹೆಚ್ಚು ಪ್ರಚಾರದಲ್ಲಿರುವುದು ಕರಾವಳಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ. ಹೀಗಾಗಿ ಇದನ್ನು ಕರಾವಳಿಯ ಕಮನೀಯ ಕಲೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಈ ಕಲೆಯ ಸಮೃದ್ಧಿ, ಸೊಗಸುಗಳಿಗೆ ಮನಸೋತು ನೆರೆಯ ಜಿಲ್ಲೆಗಳಲ್ಲಿಯೂ ಪ್ರಚಾರಗೊಳ್ಳುತ್ತಿವೆ. ಹಲವು ಮೇಳಗಳು ಈ ಕಲೆಯ ಪ್ರಚಾರಕ್ಕ ತಮ್ಮನ್ನು ತಿರುಗಾಟದಲ್ಲಿ ತೊಡಗಿಸಿಕೊಂಡಿವೆ. ಸಾವಿರಾರು ಮಂದಿ ಇದನ್ನು ಜೀವನವೃತ್ತಿಯಾಗಿ ಸ್ವೀಕರಿಸಿ ಬದುಕುತ್ತಿದ್ದಾರೆ ಎಂಬುವುದು ಸಂತೋಷದ ವಿಚಾರವಾಗಿದೆ.

ಯಕ್ಷಗಾನದಲ್ಲಿ ಬೇರೆ ಬೇರೆ ಪ್ರಾಕಾರಗಳಿವೆ. ಆಯಾ ಪ್ರಾದೇಶಿಕ ಹಿನ್ನೆಲೆಗಳಿಗೆ ಅನುಸಾರವಾಗಿ ಅದರ ಪ್ರದರ್ಶನಗಳು ರೂಢಿಯಾಗಿ ಬಂದಿವೆ. ಆದರೆ ಯಾವುದೇ ಯಕ್ಷಗಾನ ಅಥವಾ ಬಯಲಾಟ ಪ್ರದರ್ಶನಗಳು ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಯಾಗಬೇಕು ಎಂಬುದು ಆಶಯವಾಗಿದೆ. ಅಸಂಬದ್ಧತೆಯನ್ನು ಹೆಚ್ಚಾಗಿ ಅವಕಾಶ ಕೊಡಬಾರದು. ಇದು ಯಾವುದೇ ಕಲೆಗೆ ಭೂಷಣವಲ್ಲ. ಇನ್ನಾದರೂ ಕಲಾವಿದರು ಇದರ ಕುರಿತು ಸ್ಪಷ್ಟತೆಯಿಂದ ಮುಂದುವರಿದರೆ ಉತ್ತಮ. ಇದರೊಂದಿಗೆ ಪ್ರದರ್ಶನಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕಲಾವಿದರಿಗೂ ಸಮಾನ ಅವಕಾಶ ದೊರೆಯುವಂತೆ ಸಹಕರಿಸಬೇಕು. ಎಲ್ಲ ಪ್ರದರ್ಶನಗಳಲ್ಲಿನ ಬೇರೆ ಬೇರೆ ಜವಾಬ್ದಾರಿಯನ್ನು ನಿರ್ವಹಿಸುವವರು ಒಟ್ಟಾರೆ ಪ್ರದರ್ಶನದ ಹೊಣೆಗಾರಿಕೆಯನ್ನು ತಿಳಿದು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಹಾಗಿದ್ದಾಗ ಒಟ್ಟಾರೆ ಪ್ರದರ್ಶನ, ಕಲೆಯ ಸಾಂಸ್ಕೃತಿಕ ಸೌಂದರ್ಯ ಮತ್ತು ವೈಭವವನ್ನು ಜನರಿಗೆ ಕಟ್ಟಿ ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Click Here

ವರ್ಷ ವರ್ಷ ಮೇಳಗಳು ಹೆಚ್ಚುತ್ತಾ ಇದೆ. ಹೊಸ ಹೊಸ ಪ್ರಸಂಗಗಳು ಸೃಷ್ಟಿಯಾಗುತ್ತಿದೆ ಆದರೆ ನೋಡುಗರ ಸಂಖ್ಯೆ ಕ್ಷೀಣಿಸುತ್ತಾ ಇದೆ. ಪ್ರದರ್ಶನದ ಗುಣಮಟ್ಟ ಕುಸಿಯುತ್ತಿದೆ. ಕಲೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ. ಕಾರಣ ಹುಡುಕುತ್ತಾ ಹೋದರೆ ಕಲಾವಿದರಿಗೆ ಸರಿಯಾದ ಗುರುತಿಸುವಿಕೆ ದೊರೆಯುತ್ತಿಲ್ಲ. ವೃತ್ತಿಗೆ ಸರಿಯಾದ ಭದ್ರತೆಯಿಲ್ಲ. ಪರಿಹಾರವಾಗಿ ಉತ್ತಮ ಸಂಭಾವನೆ, ಪಿಂಚಣಿ, ಕಾಲಮಿತಿ ಮತ್ತು ಜೀವವಿಮೆ ಈ ರೀತಿಯ ಸೌಲಭ್ಯಗಳು ಸಿಕ್ಕಾಗ ಉತ್ತಮ ಕಲಾವಂತಿಕೆಯ ಜೀವಂತಿಕೆಯನ್ನು ನೋಡಲು ಸಾಧ್ಯವಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಯಕ್ಷಗಾನದ ಕುರಿತು ಆಸಕ್ತಿ ಹೆಚ್ಚುತ್ತಿರುವುದು ಕಂಡುಬರುತ್ತದೆ. ಉತ್ತಮ ಭಾಗವತಿಕೆ, ಮೇಳಗಳು, ತರಬೇತಿಗಳು ಯಕ್ಷಗಾನದ ಕುರಿತ ಆಸಕ್ತಿಯನ್ನು ಕಲ್ಪಸಿದೆ.

ನಮ್ಮ ಹೆಮ್ಮೆಯ ಕಲೆ ಯಕ್ಷಗಾನ ನಮ್ಮ ರಾಜ್ಯದ ಪ್ರಾತಿನಿಧಿಕ ಕಲೆಯಾಗಬೇಕು. ಸಮರ್ಥಭಾಗವತರು, ಕಲಾವಿದರು, ಸೃಷ್ಟಿಯಾಗಿ ಪ್ರದರ್ಶನದ ಗುಣಮಟ್ಟ ಹೆಚ್ಚಬೇಕು. ಕಾಲಮಿತಿಯ ಪ್ರದರ್ಶನ ಜಾರಿಗೆ ಬರಬೇಕು. ಯಕ್ಷಗಾನಕ್ಕಾಗಿಯೇ ಪ್ರತ್ಯೇಕ ಅಕಾಡೆಮಿ ರಚನೆಯಾಗಿ ಸರಕಾರದ ಅನುದಾನ ಹೆಚ್ಚಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಸಾಣೆಹಳ್ಳಿ, ಚಿತ್ರದುರ್ಗ ಜಿಲ್ಲೆ ಮಾತನಾಡಿ ಬೆಳಗುವ ದೀಪದಿಂದ ಕತ್ತಲೆಹೋಗುವಂತೆ ಜ್ಞಾನದಿಂದ ಅಜ್ಞಾನ ಹೋಗುತ್ತದೆ. ಈ ಹಿಂದೆ ಜನರು ಸಾಂಸ್ಕೃತಿಕ ಕ್ಷೇತ್ರಕ್ಕೆ ಹತ್ತಿರವಿದ್ದರು. ಜಾನಪದ ಕಲೆಗಳು ಅಥವಾ ಯಾವುದೇ ಸಾಂಸ್ಕೃತಿಕ ಕಲೆಗಳು ಜೀವನ ಪಾಠವನ್ನು ತಿಳಿಸುತ್ತಿದ್ದವು. ಜನರಲ್ಲಿ ಸೌಹಾರ್ದತೆ ಮತ್ತು ಸಂಘಟನೆ ಬೆಳೆಸುವಲ್ಲಿ ಯಶಸ್ವಿಯಾಗುತ್ತಿದ್ದವು. ಮಾನವೀಯ ಅಂತಃಕರಣ ಬೆಳೆಯುತ್ತದೆ. ಇಚ್ಛಾಶಕ್ತಿ, ಮನೋಬಲ, ಆತ್ಮಸ್ಥೈರ್ಯ ಬೆಳೆಸುತ್ತದೆ. ಆಗಿನ ಕಾರ್ಯಕ್ರಮಗಳು ಬದುಕಲ್ಲಿ ದೀಪಹಚ್ಚಿ ಬೆಳಕು ನೀಡುತ್ತಿದ್ದವು. ಈಗಿನವುಗಳಿಂದ ಬೆಂಕಿಹಚ್ಚುವ ಕೆಲಸವಾಗುತ್ತಿದೆ. ಇಂದಿನ ದಿನಮಾನಸದಲ್ಲಿ ಜ್ಞಾನದ ಹೆಸರಲ್ಲಿ ಅವಿವೇಕ, ಭೃಷ್ಟತೆ, ದುಶ್ಚಟಗಳು ಅನಾಗರಿಕತೆ ಹೆಚ್ಚಾಗುತ್ತಿದೆ. ನಾವು ಸಾಂಸ್ಕೃತಿಕ ಕ್ಷೇತ್ರದಿಂದ ದೂರ ಸರಿಯುತ್ತಿದ್ದೇವೆ. ಈಗಿನ ಯುವ ಜನಾಂಗಕ್ಕೆ ಕಷ್ಟದ ಅರಿವಿಲ್ಲ ಸಂಸ್ಕಾರದ ಪರಿವೆಇಲ್ಲ. ಬದುಕಿನ ಬಗ್ಗೆ ಗೌರವವಿಲ್ಲ. ಇಂತಹ ಸಮ್ಮೇಳನಗಳು ದೀಪ ಹಚ್ಚುವಂತಹ ಮತ್ತು ಸಾಂಸ್ಕೃತಿಕತೆಯನ್ನು ಉಳಿಸುವಂತಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ಹೆಚ್.ಶಾಂತಾರಾಮ್, ಆಡಳಿತಾಧಿಕಾರಿಗಳು, ಅಕಾಡೆಮಿ ಆಫ ಜನರಲ್ ಎಜುಕೇಶನ್, ಮಣಿಪಾಲ, ಎ.ಎಸ್.ಎನ್.ಹೆಬ್ಬಾರ್ಮತ್ತು ಎಸ್.ಎನ್.ಪಂಜಾಜೆ ಅಧ್ಯಕ್ಷರು, ಸ್ವಾಗತ ಸಮಿತಿ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ರಿ. ಬೆಂಗಳೂರು ಇವರುಗಳು ಉಪಸ್ಥಿತರಿದ್ದರು.

ದಿವಾಕರ ಡೋಂಗ್ರೆ ಆಶಯ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಯಕ್ಷಗಾನ ಸಂಘದ ಸಂಚಾಲಕರಾದ ಡಾ.ರಮೇಶ್ಚಿಂಬಾಳ್ಕರ್ವಂದಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ಅರುಣಕುಮಾರ ಎಸ್ ಕಾರ್ಯಕ್ರಮ ನಿರ್ವಹಿಸಿದರು.

 

Leave a Reply

Your email address will not be published. Required fields are marked *

three + 18 =