ಕಲೆಗೆ ಯಾವುದರ ಹಂಗೂ ಇಲ್ಲ: ಅರುಣಕುಮಾರ್ ಶಿರೂರು

Call us

Call us

ಬೈಂದೂರು: ಕಲಾವಿದರು ಎಲ್ಲಿಯೇ ಇದ್ದರೂ ಸಹಜವಾಗಿ ಕಲೆಯನ್ನು ಅರಳಿಸಬಲ್ಲರು. ಕಲೆಗೆ ಧರ್ಮ, ಜಾತಿ, ದೇಶ, ಗಡಿಯ ಹಂಗಿಲ್ಲ ಎಂದು ಪತ್ರಕರ್ತ ಅರುಣಕುಮಾರ್ ಶಿರೂರು ಹೇಳಿದರು.

Call us

Call us

Call us

ಅವರು ಸಂಚಲನ ರಿ. ಹೊಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಹೊಸೂರಿನ ಹೊಂಗಿರಣ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ’ಶರತ್ ರಂಗ ಸಂಚಲನ -೨೦೧೫’ರ ಮೂರನೇ ದಿನ ರಂಗ-ಗಾನ-ವೈಭವದಲ್ಲಿ ಶುಭ ಶಂಸನೆಗೈದರು.

ಅನುಕೂಲವಿದ್ದಾಗ ಎಲ್ಲರೂ ಕಾರ್ಯಕ್ರಮ ಮಾಡುತ್ತಾರೆ. ಆದರೆ ಅನಾನುಕೂಲವಿದ್ದಾಗಲೂ ಕಾರ್ಯಕ್ರಮ ಆಯೋಜಿಸುವುದು ವಿಶೇಷವಾದದು. ಇದು ನೈಜ ಕಲಾವಿದರಿಂದ ಮಾತ್ರ ಸಾಧ್ಯವಾಗುತ್ತದೆ. ಇಂತಹ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಅದ್ಭುತ ಕಲಾವಿದರುಗಳು ಹುಟ್ಟಿಕೊಳ್ಳುವಂತಾಗಲಿ ಎಂದು ಆಶಿಸಿದರು.

ರಂಗನಟ ಗಿರೀಶ್ ಬೈಂದೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೃಷಿ ಕೂಲಿ ಕಾಯಕದ ಜನರ ನಡುವೆ ನಾಟಕ ತಂಡವನ್ನು ಕಟ್ಟುವುದು ಸಾಮಾನ್ಯವಾದುದಲ್ಲ. ರಾಜ್ಯದಲ್ಲಿ ಬುಡಕಟ್ಟು ಜನಾಂಗದ ನಾಟಕ ತಂಡವಿರುವುದು ಹೊಸೂರಿನಲ್ಲಿ ಮಾತ್ರವೆಂಬುದು ವಿಶೇಷ ಎಂದರು. ಕಾರ್ಯಕ್ರಮದಲ್ಲಿ ಹೊಸೂರು ಸುಬ್ಬ ಪೂಜಾರಿ ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

four × two =