ಕಲೆ ಹಾಗೂ ಸಾಹಿತ್ಯ ಮನುಷ್ಯನ ಕೈಹಿಡಿದು ನಡೆಸುತ್ತದೆ: ಸುಬ್ರಹ್ಮಣ್ಯ ಶೆಟ್ಟಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಾವ ವ್ಯಕ್ತಿಗೆ ನಾಟಕ, ಸಂಗೀತ, ಸಾಹಿತ್ಯ, ಕಲೆ ಮತ್ತು ಪುಸ್ತಕಗಳ ಆಸಕ್ತಿ ಇಲ್ಲವೋ ಆತ ಮನುಷ್ಯನಾಗಿರಲು ಸಾಧ್ಯವಿಲ್ಲ. ಬದುಕಿನ ಅವಕಾಶಗಳನ್ನು ಅರಸಿ ಎಲ್ಲೆಯೋ ನೆಲೆ ಕಾಣಲು ಹೊರಟರೂ ಅಂತಿಮವಾಗಿ ಕಲೆ ಹಾಗೂ ಸಾಹಿತ್ಯ ಮನುಷ್ಯನ ಕೈಹಿಡಿದು ನಡೆಸುತ್ತದೆ. ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.

Click Here

Call us

Call us

ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ನಡೆದ ಲಾವಣ್ಯದ ರಂಗವೈವಿಧ್ಯ-2021 ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

Click here

Click Here

Call us

Visit Now

ಬೈಂದೂರಿನಲ್ಲಿ ರಂಗಾಸಕ್ತರು, ಕಲಾಭಿಮಾನಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇಲ್ಲಿ ವರ್ಷವಿಡೀ ವಿವಿಧ ಸ್ಥರದ ರಂಗ ಚಟುವಟಿಕೆಗಳು ನಡೆಯುತ್ತಿರುವ ಈ ಪ್ರದೇಶವನ್ನು ರಂಗ ಕಾಶಿ ಎಂದರೂ ಅತಿಶಯೋಕ್ತಿ ಅಗಲಾರದು. ಈ ಸಮಾಜವನ್ನು ನೋಡಿ ಅದನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅರಿಯಬೇಕು ಎಂಬ ಮಹದಾಸೆ ಹೊಂದಿರುವ ಸೃಜನಶೀಲ ಪ್ರೇಕ್ಷಕವೃಂದ ಈ ಭಾಗದಲ್ಲಿದೆ. ಕಳೆದ 44 ವರ್ಷಗಳಿಂದ ಒಂದು ಕಲಾಸಂಸ್ಥೆ ಸದೃಢವಾಗಿರುವುದಕ್ಕೆ ಅದರಲ್ಲಿರುವ ಎಲ್ಲಾ ಸದಸ್ಯರು ರಂಗಭೂಮಿ ಹಾಗೂ ರಂಗಪ್ರಕಾರಗಳ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೇಂಬ ಅಚಲವಾದ ನಂಬಿಕೆ ಹಾಗೂ ಆಸಕ್ತಿ ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು.

ಸಾಹಿತಿ ಬಾಡ ಪ್ರವೀಣ್‌ಕುಮಾರ್ ಶೆಟ್ಟಿ ಮಾತನಾಡಿ, ಕಲಾಪೋಷಕರು ಹಾಗೂ ಪ್ರೇಕ್ಷಕರು ಕಲೆ ಮತ್ತು ಕಲಾವಿದರ ಹಿಂದಿರುವ ದೊಡ್ಡಶಕ್ತಿ. ಸಾಂಸ್ಕೃತಿಕ ಅಭಿರುಚಿ, ಅಭಿಮಾನ ಹಾಗೂ ಹಿರಿಯರ ಸನ್ನಡತೆಯ ಸಹಕಾರದಿಂದ 44 ವರ್ಷಗಳಿಂದ ರಂಗಕೃಷಿಯಲ್ಲಿ ತೊಡಗಿಸಿಕೊಂಡ ಲಾವಣ್ಯ ತನ್ನ 44ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ ಅನ್ನುವುದಕ್ಕಿಂತ ಇಲ್ಲಿನ ಪ್ರೇಕ್ಷಕರು ತಮ್ಮ ಪ್ರಬುದ್ಧತೆಯ ೪೪ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಲಾವಣ್ಯದ ಗೌರವಾಧ್ಯಕ್ಷ ವಿ. ಆರ್. ಬಾಲಚಂದ್ರ ಅಧ್ಯಕ್ಷತೆ ವಹಿಸಿದ್ದರು. ಬೈಂದೂರಿನ ಪೌರಕಾರ್ಮಿಕರಾದ ಉಮೇಶ ಕೊರಗ, ಗಿರೀಶ್ ಕೊರಗ, ಹರೀಶ್ ಕೊರಗ, ಸತೀಶ್ ಕೊರಗ, ಕಮಲ, ಸುವರ್ಣ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

Call us

ಸಂಸ್ಥೆಯ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು, ಉಡುಪಿ ಸಂಸ್ಕೃತಿ ವಿಶ್ ಪ್ರತಿಷ್ಠಾನದ ಗೌರವಾಧ್ಯಕ್ಷ ಯು. ವಿಶ್ವನಾಥ ಶೆಣೈ, ಉದ್ಯಮಿ ಕೆ. ಬಾಬು ಶೆಟ್ಟಿ ತಗ್ಗರ್ಸೆ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಐ. ನಾರಾಯಣ, ಬೈಂದೂರು ಸಿಟಿ ಜೆಸಿಐ ಅಧ್ಯಕ್ಷ ಶ್ರೀಧರ ಆಚಾರ್ಯ, ವಿದ್ಯುತ್ ಗುತ್ತಿಗೆದಾರ ಸವಿತಾ ದಿನೇಶ್ ಗಾಣಿಗ, ಸಾಹಿತಿ ಪ್ರವೀಣ್‌ಕುಮಾರ್ ಶೆಟ್ಟಿ ಬಾಡ, ಕಾರ್ಯದರ್ಶಿ ಮೂರ್ತಿ ಬೈಂದೂರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಹರೇಗೋಡು ಉದಯ್ ಆಚಾರ್ಯ ಸ್ವಾಗತಿಸಿ, ನಾಗರಾಜ ಪಿ. ಯಡ್ತರೆ ನಿರೂಪಿಸಿ, ದಯಾನಂದ ಪಿ. ವಂದಿಸಿದರು. ನಂತರ ನೃತ್ಯ ನಿಕೇತನ ಕೊಡವೂರು ತಂಡದವರು ಸುಧಾ ಆಡುಕಳ ರಚನೆಯ ಶ್ರೀಪಾದ ಭಟ್ ನಿರ್ದೇಶನದ ನಾರಸಿಂಹ ನೃತ್ಯ ನಾಟಕ ಪ್ರದರ್ಶಿಸಿದರು.

 

Leave a Reply

Your email address will not be published. Required fields are marked *

one × four =