ಕಲ್ಮಾಡಿ ಯುವಕ ಮಂಡಲ ಕೋಟತ್ತಟ್ಟು ವಾರ್ಷಿಕೋತ್ಸವ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಕಲ್ಮಾಡಿ ಯುವಕ ಮಂಡಲ ರಿ. ಇದರ ವಾರ್ಷಿಕೋತ್ಸವ ಸಮಾರಂಭ ಕೋಟತ್ತಟ್ಟು ಕಾರಂತ ಥೀಂ ಪಾರ್ಕ್ ಸಮೀಪ ಶ್ರೀಧರ ಗಾಣಿಗರ ಮನೆ ವಠಾರದಲ್ಲಿ ಜರಗಿತು.

Call us

Call us

Visit Now

ಕಾರ್ಯಕ್ರಮವನ್ನು ಬೆಂಗಳೂರಿನ ಉದ್ಯಮಿ ಬೇಳೂರು ರಾಘವೇಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಒಗ್ಗಟ್ಟಿನ ಮೂಲಕ ಯುವ ಸಮುದಾಯ ಕಾರ್ಯಪ್ರವೃತ್ತಗಾಗುವುದನ್ನು ನಾವುಗಳು ಇತ್ತೀಚಿಗಿನ ದಿನಗಳಲ್ಲಿ ಕಾಣುತ್ತಿದ್ದೇವೆ ಅದು ಆಯಾ ಊರಿನ ಶ್ರೇಯಾಭಿವೃದ್ಧಿಗೆ ಪೂರಕವಾದ ಯುವಕ ಮಂಡಲಗಳನ್ನು ಸ್ಥಾಪಿಸಿಕೊಂಡು ಸಮಾಜಮುಖಿ ಚಿಂತನೆಗಳನ್ನಿರಿಸಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ. ಇಂಥಹ ಸಂಘಟನೆಗಳು ರಾಜಕೀಯ ರಹಿತವಾಗಿ ಚಟುವಟಿಕೆಯಲ್ಲಿದ್ದಾಗ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಸನ್ಮಾನಗಳು ಎತ್ತೇಚ್ಚವಾಗಿ ಹಲವು ಸಂಘಟನೆಗಳ ಮೂಲಕ ನಡೆಯುತ್ತದೆ.ಆದರೆ ಕಾರಂತರು ಹುಟ್ಟಿದ ಈ ನೆಲದಲ್ಲಿ ಸನ್ಮಾನಿಸುವ ವ್ಯಕ್ತಿಗಳು ಅದಕ್ಕೆ ಅರ್ಹರಾಗಿರುತ್ತಾರೆ ಎಂಬ ನಂಬಿಕೆ ನನ್ನದು ಅಂಥಹ ವ್ಯಕ್ತಿಯನ್ನು ನೀವು ಆರಿಸಿದ್ದೀರಿ. ಸುಕ್ರಿಬೋಮ್ಮೆಗೌಡ ಎನ್ನುವಂಥ ಮಹಿಳೆಗೆ ಗೌರವ ನೀಡುತ್ತಿರುವುದು ನಿಮ್ಮ ಸಂಘಟನೆಗೆ ಹಾಗೂ ಊರಿಗೆ ಗೌರವವನ್ನು ಇಮ್ಮಡಿಗೊಳಿಸಿದೆ ಎಂದು ಅಭಿಪ್ರಾಯಪಟ್ಟರು.

Click Here

Click here

Click Here

Call us

Call us

ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಸುಕ್ರಿ ಬೋಮ್ಮೆಗೌಡರಿಗೆ ಕಲ್ಮಾಡಿ ಯುವಕ ಮಂಡಲದ ಪ್ರಶಸ್ತಿ ನೀಡಿ ಗೌರವಿಸಿದ ಮಾಜಿ ಸಂಸದ ಕೆ.ಜಯಪ್ರಕಾಶ ಹೆಗಡೆ ಮಾತನಾಡಿ ಯುವಕ ಮಂಡಲಗಳ ಕಾರ್ಯದಕ್ಷತೆ ಅದರ ಹೆಸರಿಗೆ ತಕ್ಕಂತಿರುತ್ತದೆ ಅದರ ಸಂಕಲನದ ಮೂಲಕ ನಾಳೆಗಳನ್ನು ಕಟ್ಟೋಣ ಎನ್ನುವ ದ್ಯೇಯೋದ್ದೇಶ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಪ್ರಶಸ್ತಿ ತೆಗೆದು ಕೊಳ್ಳುವರ ವ್ಯಕ್ತಿಯ ಮೇಲೆ ಕಾರ್ಯಕ್ರಮ ತಿರ್ಮಾನವಾಗುತ್ತದೆ.ಸುಕ್ರಿಬೊಮ್ಮೆಗೌಡ ಜಾನಪದದ ಕೊಂಡಿಗೆ ಪದ್ಮಶ್ರೀ ಒಲಿಯಿತು.ಅದರಂತೆ ಎಲ್ಲಿಯ ಕಲ್ಮಾಡಿ ಎಲ್ಲಿಯ ಸುಕ್ರಜ್ಜಿಗೆ ಪ್ರಶಸ್ತಿ ಅರಸಿ ಬರುವುದು ಅವರ ಕಲಾ ಕ್ಷೇತ್ರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಅವರು ಮುಂದಿನ ಯುವ ಪೀಳಿಗೆಗೆ ಮಾದರಿ.ನಮ್ಮ ಜೀವನದಲ್ಲಿ ಇನ್ನೊಬ್ಬರಿಗೆ ತೊಂದರೆ ನೀಡಿ ಬದುಕಬಾರದು.ಬದುಕಿನಲ್ಲಿ ಇನ್ನೊಬ್ಬರಿಗೆ ಸಹಕಾರ ನೀಡಿ ಬದುಕಿದಾಗ ಸಾರ್ಥಕತೆಯನ್ನು ಕಾಣಬಹುದು ಇದರಿಂದ ಶುದ್ಧ ನಾಳೆಯನ್ನು ಕಟ್ಟುವಂತೆ ಕರೆನೀಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ನಾಗರಾಜ್ ಪುತ್ರನ್,ಕುಲುಮೆ ವೃತ್ತಿಯ ಸತ್ಯಮ್ಮ ಆಚಾರ್,ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ರಂಜೀತ್ ಜಿ,ಭರತ್ ಕೋಟ ಇವರಿಗೆ ಹುಟ್ಟೂರ ಸನ್ಮಾನ ನೀಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಕಲ್ಮಾಡಿ ಯುವಕ ಮಂಡಲದ ಅಧ್ಯಕ್ಷ ಭರತ್ ಶ್ರೀಯಾನ್ ವಹಿಸಿದರು. ಕೋಟೇಶ್ವರದ ವರದರಾಜ್ ಶೆಟ್ಟಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಎಸ್ ನಾಯಕ ಶುಭಾಂಶನೆಗೈದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ,ಕೋಟತ್ತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಎಚ್ ಪ್ರಮೋದ್ ಹಂದೆ,ಜಯಕರ್ನಾಟಕ ಸಂಘಟನಾ ಕಾರ್ಯದರ್ಶಿ ಸತೀಶ್ ಪೂಜಾರಿ ಸಾಲಿಗ್ರಾಮ,ಉದ್ಯಮಿ ಮಹೇಶ್ ಕುಮಾರ್ ಪೂಜಾರಿ,ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಸುಬ್ರಾಯ ಆಚಾರ್ಯ, ಭಗತ್ ಸಿಂಗ್ ಕ್ರಾಂತಿಕಾರಿ ಬಳಗದ ರಾಜೇಶ್ ಕೋಟೇಶ್ವರ,ರಾಜೇಂದ್ರ ಸಂಗಮ್ ಉಪಸ್ಥಿತರಿದ್ದರು.ಯುವಕ ಮಂಡಲದ ಗೌರವಾಧ್ಯಕ್ಷ ಲಿಯಾಕಾತ್ ಆಲಿ ಪ್ರಾಸ್ತಾವನೆಗೈದರು.ಕಾರ್ಯದರ್ಶಿ ಪ್ರಸಾದ್ ಬಿಲ್ಲವ ಸ್ವಾಗತಿಸಿದರು.ಕಾರ್ಯಕ್ರಮವನ್ನು ಚಿತ್ರಪಾಡಿ ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು,ಶಮಂತ್ ಕುಮಾರ್ ಕೆ.ಎಸ್ ವಂದಿಸಿದರು.ಕೋಶಾಧಿಕಾರಿ ಉಮೇಶ್ ಪೂಜಾರಿ ,ಸಲಹಾ ಸಮಿತಿಯ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಮನೋಹರ ಪೂಜಾರಿ ಸಹರಿಸಿದರು.

ಸ್ಥಳೀಯ ಕಲ್ಮಾಡಿ ಅಂಗನವಾಡಿ ಪುಟಾಣಿಗಳಿಂದ ನೃತ್ಯ ವೈವಿಧ್ಯ,ಮೂಲ್ಕಿ ಯುವವಾಹಿನಿ ಕಲಾವಿದರಿಂದ ತುಳುನಾಡ ವೈಭವ ಕಾರ್ಯಕ್ರಮಗಳು ಜರಗಿತು.

 

Leave a Reply

Your email address will not be published. Required fields are marked *

one × 4 =