ಕಲ್ಲಡ್ಕ ಅವರ ಬಂಧನವಲ್ಲ, ಕೂದಲನ್ನೂ ಮುಟ್ಟಲಾಗದು: ಸುಬ್ರಹ್ಮಣ್ಯ ಹೊಳ್ಳ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲ್ಲಡ್ಕದಲ್ಲಿ ನಡೆದ ಘಟನೆ ವ್ಯಕ್ತಿಗತ ಘಟನೆಯಾಗಿದ್ದು ಈ ಘಟನೆಯನ್ನು ಚೆನ್ನಾಗಿ ಸದುಪಯೋಗಪಡಿಸಿಕೊಂಡು ಮುಂಬರುವ ಚುನಾವಣೆಯಲ್ಲಿ ಮತಬ್ಯಾಂಕ್ ಭದ್ರ ಮಾಡಿಕೊಳ್ಳಲು ಕೋಮು ಬಣ್ಣ ಹಚ್ಚಿ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನಗಳನ್ನು ಕಾಂಗ್ರೇಸ್ ಮಾಡುತ್ತಿದೆ ಎಂದು ಆರೆಸ್ಸಸ್ ವಿಭಾಗೀಯ ಕಾರ್ಯಕಾರಣಿ ಸಮಿತಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.

Call us

Call us

ಅವರು ಅರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಕೇಸು ದಾಖಲಿಸುವಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿದ ಸಚಿವ ರಮಾನಾಥ ರೈ ವಿರುದ್ದ ಸೋಮವಾರ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕುಂದಾಪುರ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಯಾವುದೇ ಕೊಲೆಗೆ ಪ್ರಯತ್ನವನ್ನು ಮಾಡದ ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ 307 ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ತರಿಸಿರುವ ಸಚಿವ ರಮಾನಾಥ ರೈ ಅವರಿಗೆ ಕಲ್ಲಡ್ಕ ಅವರ ಬಂಧನವಲ್ಲ ಅವರ ಕನಿಷ್ಠ ಕೂದಲು ಮುಟ್ಟಲು ಸಾಧ್ಯವಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂಜಾವೇ ಮುಖಂಡ ಅರವಿಂದ ಕೋಟೇಶ್ವರ ಅವರು 307 ಸೆಕ್ಷನ್ ಬಗ್ಗೆ ಕನಿಷ್ಟ ಅರಿವೇ ಇಲ್ಲದ ಮಂತ್ರಿಗಳು ರಾಜ್ಯ ಸರಕಾರದಲ್ಲಿ ಇದ್ದಾರೆ ಎಂದರೆ ನಾಚಿಕೆಗೇಡು. ಇದು ಇವತ್ತಿಗೆ ಕೊನೆಯಾಗಬೇಕು ಇಲ್ಲವಾದಲ್ಲಿ ಹಿಂದೂ ಪರ ಸಂಘಟನೆಗಳು ಒಗ್ಗುಟಿ ಹೋರಾಬೇಕಾಗುತ್ತದೆ ಎಂದರು.

Call us

ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿ, ಸಂಘ ಪರಿವಾರದ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ ಸಚಿವ ರಮಾನಾಥ ರೈ ಸಂಪುಟದಿಂದ ಕೆಳಗಿಳಿಯಬೇಕು. ಅವರ ವಿರುದ್ಧ ಈಗಾಗಲೇ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದ್ದು , ಅವರನ್ನು ಕೂಡಲೇ ಪೊಲೀಸರು ಬಂಽಸಬೇಕು ಎಂದು ಆಗ್ರಹಿಸಿದರು.

ಈ ಪ್ರತಿಭಟನಾ ಸಭೆಯಲ್ಲಿ ಬಜರಂಗದಳ ಕೋಟೇಶ್ವರ ಸಂಚಾಲಕ ಸುರೇಂದ್ರ ಮಾರ್ಕೋಡು, ಮುಖಂಡರಾದ ಕಾಡೂರು ಸುರೇಶ ಶೆಟ್ಟಿ, ಮಹೇಶ ಪೂಜಾರಿ, ಶಂಕರ ಅಂಕದಕಟ್ಟೆ, ವಾದಿರಾಜ ಭಟ್, ಅಣ್ಣಪ್ಪ ಕೋಟೇಶ್ವರ, ಸುಽರ ಭಂಡಾರಿ, ಅಶೋಕ ಕಾಗೇರಿ, ಭಾಸ್ಕರ ಬಿಲ್ಲವ ಮೊದಲಾದವರು ಉಪಸ್ಥಿತರಿದ್ದರು.

Read this: ಕಲ್ಲಡ್ಕ ಅವರನ್ನು ಬಂಧಿಸುವ ಬದಲು ಕಾಂಗ್ರೆಸ್ ಪಕ್ಷದ ಗೂಂಡಾಗಳ ಬಂಧಿಸಲಿ: ರೈ ವಿರುದ್ದ ಪ್ರತಿಭಟನೆಯಲ್ಲಿ ಆಗ್ರಹ – http://kundapraa.com/?p=23565

 

One thought on “ಕಲ್ಲಡ್ಕ ಅವರ ಬಂಧನವಲ್ಲ, ಕೂದಲನ್ನೂ ಮುಟ್ಟಲಾಗದು: ಸುಬ್ರಹ್ಮಣ್ಯ ಹೊಳ್ಳ

Leave a Reply

Your email address will not be published. Required fields are marked *

seven + seventeen =