ಕಸಾಯಿಖಾನೆಗೆ ಸಾಗಿಸಲು ಪ್ರಯತ್ನಿಸುತ್ತಿದ್ದ ಜಾನುವಾರುಗಳ ರಕ್ಷಣೆ

Call us

Call us

ಕೋಟ: ಕಸಾಯಿಖಾನೆಗೆ ಸಾಗಿಸಲು ಪ್ರಯತ್ನಿಸುತ್ತಿದ್ದ ಮೂರು ಜಾನುವಾರುಗಳನ್ನು ರಕ್ಷಿಸಿ, ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಪ್ರಕರಣ ಬೆಳಗಿನ ಜಾವ ಶಿರಿಯಾರ ಸಮೀಪ ನೈಲಾಡಿಯಲ್ಲಿ ನಡೆದಿದೆ.

Call us

Call us

Call us

ಇಲ್ಲಿನ ಚಿಕ್ಕು ದೇವಸ್ಥಾನಕ್ಕೆ ಹೋಗುವ ಕ್ರಾಸ್‌ ಬಳಿ ಹಾಡಿಯಲ್ಲಿ ಅಕ್ರಮವಾಗಿ ಮೂರು ಹೆಣ್ಣು ಕರುಗಳನ್ನು ಕಟ್ಟಿ ಹಾಕಿಕೊಂಡಿರುವ ಬಗ್ಗೆ ಖಚಿತ ವರ್ತಮಾನ ಪಡೆದ ಕೋಟ ಠಾಣಾಧಿಕಾರಿ ಕಬ್ಟಾಳ್‌ರಾಜ್‌ ಅವರು ತಮ್ಮ ಸಿಬಂದಿಗಳೊಂದಿಗೆ ದಾಳಿ ನಡೆಸಿದ್ದು, ಈ ಸಂದರ್ಭ ಮೂವರು ಆರೋಪಿಗಳಲ್ಲಿ ಸಂತೋಷ್‌ ಶೆಟ್ಟಿ ಹಾಗೂ ರಜಾಕ್‌ ಪರಾರಿಯಾಗಿದ್ದು ಕೃಷ್ಣ ಗಿಳಿಯಾರು ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಬಜಾಜ್‌ ಡಿಸ್ಕವರ್‌ ಬೈಕ್‌, ವ್ಯಾಪಾರಕ್ಕೆ ಬಳಿಸಿದ 3200ರೂ ನಗದು ಹಾಗೂ 3 ಮೊಬೆ„ಲ್‌ ಪೋನ್‌ ವಶಪಡಿಸಿಕೊಳ್ಳಲಾಗಿದೆ.

ರಕ್ಷಿಸಿದ ಗೋವುಗಳನ್ನು ಗೋಶಾಲೆ ಹಸ್ತಾಂತರಿಸಲಾಗಿದ್ದು, ಕೋಟ ಠಾಣಾಧಿಕಾರಿಗಳ ಈ ಯಶಸ್ವಿ ಕಾರ್ಯಾಚರಣೆಗೆ ಹಿಂದೂಜಾಗರಣಾ ವೇದಿಕೆ ಕೋಟ ಹಾಗೂ ಶಿರಿಯಾರ ಘಟಕ ಶ್ಲಾಘನೆ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

one × 4 =