ಕಾಂಗ್ರೆಸ್ ಗೆ ಸಮಸ್ಯೆಗಿಂತ ಅಧಿಕಾರ ಮುಖ್ಯ: ರಘುಪತಿ ಭಟ್‌

Call us

Call us

ಕುಂದಾಪುರ: ಕರ್ನಾಟಕ ರಾಜ್ಯದಲ್ಲಿ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಬಿಬಿಎಂಪಿ ಅಧಿಕಾರ ಹಿಡಿಯಲು ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೆಸೆಯಲು ಬಿಜೆಪಿಯ ಕಾರ್ಯಕರ್ತರು ಪಣತೊಡಬೇಕು ಎಂದು  ಉಡುಪಿಯ ಮಾಜಿ ಶಾಸಕ  ರಘುಪತಿ ಭಟ್‌ ಆರೋಪಿಸಿದರು.

Call us

Call us

ಅವರು  ಉಡುಪಿಯಲ್ಲಿ ನಡೆಯಲಿರುವ ರೈತ ಚೆ„ತನ್ಯ ಯಾತ್ರೆಯ ಸಮಾವೇಶಕ್ಕೆ ಕುಂದಾಪುರ ನಗರದ ಕಾರ್ಯಕರ್ತರನ್ನು ಒಗ್ಗೂಡಿಸಲು ಕುಂದಾಪುರ ಬಿಜೆಪಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

Call us

Call us

ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರಿಂದ ರಾಜ್ಯದಲ್ಲಿ ಮುನ್ನೂರಕ್ಕೂ  ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯುತ್ ಕೊರತೆಯನ್ನು ಎದುರಿಸುತ್ತಿದ್ದು ರೈತರು, ಉದ್ಯಮಿಗಳನ್ನು ಸಂಕಷ್ಟಕ್ಕೆ ನೂಕಿದೆ. ಇದಕ್ಕಾಗಿ  ಬಿಜೆಪಿ  ಸೆ. 11ರಂದು  ಉಡುಪಿಯಲ್ಲಿ ನಡೆಯಲಿರುವ ರೈತ ಚೈತನ್ಯ ಯಾತ್ರೆಯಲ್ಲಿ ಕುಂದಾಪುರ ನಗರದ ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಿ ಕೊಡಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತ ನಾರಾಯಣ ಖಾರ್ವಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು.

ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪುಂಡಲೀಕ ನಾಯಕ್‌, ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಕಿಶೋರ್‌ ಕುಮಾರ್‌ ಕುಂದಾಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯ  ಉದಯ ಕುಮಾರ್‌ ಶೆಟ್ಟಿ, ಕ್ಷೇತ್ರ ಅಧ್ಯಕ್ಷ ರಾಜೇಶ್‌ ಕಾವೇರಿ, ಜಿಲ್ಲಾ ಉಪಾಧ್ಯಕ್ಷ ಬೆಳ್ವೆ ವಸಂತ ಕುಮಾರ್‌ ಶೆಟ್ಟಿ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ್‌ ಪೂಜಾರಿ,  ಯುವ ಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ ಕುಂದಾಪುರ ಶಕ್ತಿ ಕೇಂದ್ರ ಅಧ್ಯಕ್ಷ ರವಿರಾಜ್‌ ಖಾರ್ವಿ , ಪುರಸಭಾ ಸದಸ್ಯರಾದ ಉದಯ ಮೆಂಡನ್‌, ಸುರೇಶ್‌ ನಾಯಕ್‌, ರಾಘವೇಂದ್ರ ದೇವಾಡಿಗ, ವಿಟಲ್ ಕುಂದರ್‌, ಗೀತಾ, ವಿಜಯ ಎಸ್‌. ಪೂಜಾರಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

two × 2 =