ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಇವರ ಆಶ್ರಯದಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿ ಮಾಹಿತಿ ಕಾರ್ಯಕ್ರಮ ಇಲ್ಲಿನ ಜಪ್ತಿ ಗ್ರಾಮದಲ್ಲಿ ನಡೆಯಿತು .
ಪ್ರತಿಯೊಂದು ಮನೆಗೆ ಪಿವಿಸಿ ಪೈಪ್ ಬಳಸಿ ಮನೆಯಲ್ಲಿ ಇರುವ ಒಣ ಕಸವನ್ನು ಸಂಗ್ರಹಿಸಿ ನಮಗೆ ಬೇಕಾಗುವ ಸಾವಯವ ಗೊಬ್ಬರ ತಯಾರಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಸುಮಾರು ೫೦ ಜನರು ಇದರ ಉಪಯೋಗವನ್ನು ಪಡೆದರು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಚಂದ್ರಶೇಖರ, ಲಯನ್ ಪ್ರಕಾಶ್ ಬೆಟ್ಟನ್, ಲಯನ್ ನವೀನ್ ಕುಮಾರ್ ಶೆಟ್ಟಿ, ಲಯನ್ ನಾರಾಯಣ ಶೆಟ್ಟಿ, ಲಯನ್ ರಾಜೀವ್ ಕೋಟ್ಯಾನ್, ಲಯನ್ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.