ಕಾರಂತರಿಂದ ರಂಗ ಚಟುವಟಿಕೆಗೆ ಹೊಸ ಆಯಾಮ

Call us

Call us

ಕೋಟ: ಕಾರಂತರ ರಂಗಕಲ್ಪನೆ ಅದ್ಭುತವಾದುದು. ಅವರ ರಂಗ ಪ್ರಯೋಗಗಳು ವಿನೂತನವಾದರೂ ತಮ್ಮ ಅದ್ಭುತ ಅಸಾಧಾರಣ ರಂಗ ಪ್ರಯೋಗದಿಂದ ರಂಗಭೂಮಿಯನ್ನು ಜೀವಂತಗೊಳಿಸಿದ ಕಾರಂತರು ರಂಗ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಿದ ಮಹಾನುಭಾವ ಎಂದು ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷ ರೋ ಶ್ರೀಪತಿ ಅಧಿಕಾರಿ ಹೇಳಿದರು.

Call us

Call us

Call us

ಅವರು ಕೋಟ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ 2ನೇ ದಿನದ ಅಂಗವಾಗಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಅಶ್ವಿನೀ ಸ್ಮಾರಕ ಕೇಂದ್ರ ಮಣೂರು, ಪಂಚವರ್ಣ ಯುವಕ ಮಂಡಲ(ರಿ.) ಕೋಟ, ರಸರಂಗ ಕದ್ರಿಕಟ್ಟು ಕೋಟ ಇವರ ಸಹಯೋಗದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ದಿಬ್ಬಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.

Call us

Call us

ಕೋಟತಟ್ಟು ಪಂಚಾಯಿತಿ ಮಾಜಿ ಅಧ್ಯಕ್ಷ ರಘು ತಿಂಗಳಾಯ ದೀಪ ಪ್ರಜ್ವಲನ ಮಾಡಿದರು. ಮುಖ್ಯ ಅಶ್ವಿನೀ ಸ್ಮಾರಕ ಕೇಂದ್ರದ ಎಂ.ಎನ್.ಮಧ್ಯಸ್ಥ, ಪಂಚವರ್ಣ ಗೆಳೆಯರ ಬಳಗದ ನಾಗರಾಜ ಗಾಣಿಗ, ರಸರಂಗದ ಸುಧಾ ಮಣೂರು, ಕೋಟತಟ್ಟು ಪಂಚಾಯಿತಿ ಉಪಾಧ್ಯಕ್ಷ ಲೊಕೇಶ್ ತಿಂಗಳಾಯ ಉಪಸ್ಥಿತರಿದ್ದರು.

ಶಿಕ್ಷಕಿ ವಿದ್ಯಾ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ಪ್ರಸ್ತಾವಿಸಿದರು.
ಪಂಚಾಯಿತಿ ಕಾರ್ಯದರ್ಶಿ ಮೀರಾ ಸ್ವಾಗತಿಸಿದರು. ಚೇತನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣೇಶ್ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಕುಮಾರಿ ಅಮೃತಾ ಉಪಾಧ್ಯ ಸಾಲಿಗ್ರಾಮ ಇವರಿಂದ ನೃತ್ಯ ಸಿಂಚನ ಮತ್ತು ಸುಧಾ ಮಣೂರು ನಿರ್ದೇಶನದಲ್ಲಿ ಸತೀ ನಾಟಕ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *

twelve + 17 =