ಕಾರಂತರು ಒಂದು ವಿಶ್ವವಿದ್ಯಾಲಯದಂತಿದ್ದರು: ಡಾ. ವೆಂಕಟರಾಮ ಉಡುಪ

Call us

Call us

ಕೋಟ: ಕೋಟ ಶಿವರಾಮ ಕಾರಂತರು ಓದಿರುವುದು ಕೇವಲ ಮೆಟ್ರಿಕ್ ವರೆಗೆ ಮಾತ್ರ, ಆದರೆ ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಪರಿಣಿತಿ ಪಡೆದವರಗಿಂತ ಸಾವಿರ ಪಟ್ಟು ಅಧಿಕಾ ಜೀವನ ಸಾಧನೆ ಮಾಡಿದ್ದಾರೆ. ಅಂದರೆ ಕೇವಲ ಪಠ್ಯ ವಿಷಯಗಳು ಮಾತ್ರ ನಮ್ಮ ಜೀವನಕ್ಕೆ ಸಾಕಾಗುವುದಿಲ್ಲ ಪಠ್ಯೇತರ ಚಟುವಟಿಕೆಗಳು ಕೂಡ ನಮ್ಮ ಜೀವನಕ್ಕೆ ಅಗತ್ಯವಿದೆ ಎಂದು ಕುಂದಾಪುರದ ಸಾಂಸ್ಕೃತಿಕ ಚಿಂತಕ ಡಾ. ವೆಂಕಟರಾಮ ಉಡುಪ ಹೇಳಿದರು.

Call us

Call us

Visit Now

ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಸಂಜೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಬಾರಿಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Click here

Call us

Call us

ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಮುದ್ರಣ ಮಾಲಕರ ಸಂಘದ ಅಧ್ಯಕ್ಷ ಚಂದ್ರ ನಾರಿ, ಕಾರ್ಯದರ್ಶಿ ಪ್ರಕಾಶ್ ಜಿ.ಕೊಡವೂರು, ಕೋಶಾಧಿಕಾರಿ ಯತೀಶ್ಚಂದ್ರ, ಯಡ್ತಾಡಿ ಯುವ ವಾಹಿನಿ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷ ಸಂತೋಷ, ಶ್ರೀವಿನಾಯಕ ಯುವಕ ಮಂಡಲದ ಅಧ್ಯಕ್ಷ ಉಮೇಶ ದೇವಾಡಿಗ, ಸಾಂಸ್ಕೃತಿಕ ಚಿಂತಕ ಸಂತೋಚ, ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಗ್ರಂಥಪಾಲಕಿ ಗೀತಾ ಉಪಸ್ಥಿತರಿದ್ದರು.

ಈ ಸಂದರ್ಭ ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಾಯಿತು. ಕೋಟತಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ ಸ್ವಾಗತಿಸಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕುಮಾರಿ ರಮ್ಯಾ, ಕುಮಾರಿ ಪ್ರಜ್ಞಾ ಮತ್ತು ಕುಮಾರಿ ಪೂಜಾ ಅವರಿಂದ ನೃತ್ಯ ಸಿಂಚನ ನಡೆಯಿತು. ಬಳಿಕ ವಿಆರ್ ಫ್ರೆಂಡ್ಸ್ ಸಾಸ್ತಾನ ಇವರಿಂದ ಅಲ್ವಿನ್ ಅಂದಾದ್ರೆ ಸಾರಥ್ಯದಲ್ಲಿ ಯಾರು ಸಮ ಇಲ್ಲ ಹಾಸ್ಯಮಯ ನಾಟಕ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *

4 × 1 =