ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಕಾರಂತ ಟ್ರಸ್ಟ್ ಉಡುಪಿ, ಯು – ಚಾನೆಲ್ ಸಹಯೋಗದಲ್ಲಿ ನಡೆಯುತ್ತಿರುವ ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 16ನೇ ವರ್ಷದ ಸಂಭ್ರಮದ ಅಂಗವಾಗಿ ನಡೆಯುತ್ತಿರುವ ಸಾಹಿತ್ಯಿಕ – ಸಾಂಸ್ಕೃತಿಕ ಸುಗ್ಗಿ ಆಲ್ಮೋರ – 2020 ಮರೆಯಲಾಗದ ಶಬ್ಧತೀರ ಕಾರ್ಯಕ್ರಮದಲ್ಲಿ ಹತ್ತನೇ ದಿನದ ಕಾರಂತ ಚಿಂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ. ಸುಧಾಕರ ದೇವಾಡಿಗ ಮಾತನಾಡಿ, ಕಾರಂತರಿಗೆ ಕಾರಂತರೇ ಸಾಟಿ ಎನ್ನುವ ಮಾತಿನಂತೆ, ಕಾರಂತರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯವಾದುದು, ಅವರ ಕಾದಂಬರಿಗಳು ಕೇವಲ ಮನೋರಂಜನೆಗೆ ಸೀಮಿತವಾಗಿರದೇ ಸಮಾಜವನ್ನು ತಿದ್ದಿ ತೀಡುವ ಪ್ರಯತ್ನವಿದೆ, ಕಾರಂತರು ಇನ್ನೊಮ್ಮೆ ಹುಟ್ಟಿ ಕನ್ನಡ ಸಾಹಿತ್ಯ ಪ್ರಪಂಚ ಇನ್ನಷ್ಟು ಬೆಳಗಲಿ ಎಂದು ನುಡಿದರು.
ಕಾರಂತ ಚಿಂತನ ಕಾರ್ಯಕ್ರಮದ ಬಳಿಕ ನೆನಪು ಫೌಂಡೇಶನ್ ಸಾಸ್ತಾನ ಇವರಿಂದ ಸಂಗೀತ ಮಾಧುರ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ನಿರೂಪಿಸಿ, ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ವಂದಿಸಿದರು.