ಕಾರಂತರು ಸಾಹಿತ್ಯ ಲೋಕದ ಮುತ್ತು: ಗಣೇಶ್ ಹೊಳ್ಳ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಡಾ| ಶಿವರಾಮ ಕಾರಂತರು ಸಾಹಿತ್ಯ ಲೋಕದ ಮುತ್ತು, ಅವರ ಸಾಹಿತ್ಯ ಲೋಕದ ಕೊಡುಗೆ ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿ ಹಿಡಿದಿದೆ, ಅವರ ಈ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪಸರಿಸುವ ಉದ್ದೇಶದಿಂದ ಕಾರಂತ ಥೀಮ್ ಪಾರ್ಕ್‌ನ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ಬ್ಯಾಂಕ್ ಕೋಟ ಶಾಖೆಯ ಪ್ರಬಂಧಕ ಗಣೇಶ್ ಹೊಳ್ಳ ತಿಳಿಸಿದರು.

Call us

Call us

Visit Now

ಅವರು ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಕಾರಂತೋತ್ಸವ ಪುನರ್ವಸು-೨೦೧೯ (ಮಳೆಬಿಲ್ಲಿನ ಕನವರಿಕೆ) ಕಾರ್ಯಕ್ರಮದ ಎರಡನೇ ದಿನ ರಾಜ್ಯಮಟ್ಟದ ಚಲನಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

Click here

Call us

Call us

ವೈದ್ಯ ಭಾಸ್ಕರ್ ಆಚಾರ್ಯ ಮಾತಾನಾಡಿ ಕಾರಂತರ ಬದುಕು ಬರಹ ಯುವ ಜನಾಂಗಕ್ಕೆ ಪ್ರೇರಕವಾಗಿದ್ದು,ನಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಪ್ರಯತಿಸಬೇಕು ಎಂದರು.

ಕ.ಸಾ.ಪ ಕೋಟ ಹೋಬಳಿ ಘಟಕದ ಅಧ್ಯಕ್ಷ ಶ್ರೀ ಸತೀಶ್ ವಡ್ಡರ್ಸೆ ಮಾತನಾಡಿ ಕಾರಂತರ ಕಾದಂಬರಿಗಳು ಪ್ರಕೃತಿ ಮತ್ತು ಮಾನವ ಸಂಬಂಧಗಳ ಒಳಸುಳಿಗಳನ್ನು ಬಿಚ್ಚಿಡುತ್ತಾ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳುವ ಅಗತ್ಯತೆ ತಿಳಿಸುತ್ತಾ ಸರ್ವಕಾಲಕ್ಕೂ ಸಲ್ಲುವಂತವುಗಳು ಎಂದು ಹೇಳಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಲೋಕೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಚಲನಚಿತ್ರ ನಿರ್ದೇಶಕರಾದ ರಾಜ್ ಕೊಠಾರಿ, ಸೈಮಾ ಆವಾರ್ಡ್ ಪುರಸ್ಕೃತ ಬಾಲನಟಿ ಶ್ಲಾಘ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಿಟಿಯ ಅಧ್ಯಕ್ಷರಾದ ಶ್ರೀ ದಯಾನಂದ ಆಚಾರ್, ಕೆ.ಪಿ ಶೇಖರ್, ಸುಬ್ರಾಯ ಆಚಾರ್ ಮಣೂರು, ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚಾಯತ್ ಸಿಬ್ಬಂದಿ ಶಕೀಲಾ ನಿರೂಪಿಸಿ, ಪಂ. ಸಿಬ್ಬಂದಿ ನವೀನ್ ಕುಮಾರ್ ಸ್ವಾಗತಿಸಿದರು, ಥೀಮ್ ಪಾರ್ಕ್ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾವನೆಗೈದರು, ಸುರೇಶ್ ಕಾರ್ಕಡ ದನ್ಯವಾದ ಅರ್ಪಿಸಿದರು.

ಕೊನೆಗೆ ರಾಜ್ ಕೊಠಾರಿಯವರ ಸಾರಥ್ಯದ ಕೀಟ್ಲೆ ಕೃಷ್ಣ ಚಲನಚಿತ್ರ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

one × two =