ಕಾರಂತರ ಚಿಂತನೆಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಥೀಮ್ ಪಾರ್ಕ್‌ನಿಂದ ಸಹಕಾರ: ರಾಜಶೇಖರ್ ಮೂರ್ತಿ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶಿಕ್ಷಣಕ್ಕೆ ಅರಿವು ಮತ್ತು ಅಕ್ಷರವೇ ಮೂಲ, ಚೋಮನ ದುಡಿಯಂತಹ ತಳ ಸಮುದಾಯದ ಬದುಕಿನ ಕುರಿತು ಕೃತಿ ರಚಿಸಿ ಚಿಂತಕನೊಬ್ಬನ ಚಿಂತನೆಗೆ ದಾರಿ ತೋರಿದ ಕಾರಂತರ ನೆನಪಿನಲ್ಲಿರುವ ಈ ಕಾರಂತ ಥೀಮ್ ಪಾರ್ಕ್ ಸಮಾಜಕ್ಕೆ ಕಾರಂತರ ಚಿಂತನೆಗಳನ್ನು, ಅವರ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಸ್ಥಳವಾಗಿದ್ದು, ಇನ್ನಷ್ಟೂ ಅಭಿವೃದ್ಧಿಗೊಂಡು ಸಾಹಿತ್ಯ ಪ್ರೇಮಿಗಳನ್ನು ಸೆಳೆಯುವಂತಾಗಲಿ ಎಂದು ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ್ ಮೂರ್ತಿ ಹೇಳಿದರು.

Call us

Click Here

Click here

Click Here

Call us

Visit Now

Click here

ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿಗೆ ಮಾಲರ್ಪಣೆ ಮಾಡಿ ರಂಗ ಮಂದಿರ ಆರ್ಟ್ ಗ್ಯಾಲರಿ, ಅಂಗನವಾಡಿ, ಗ್ರಂಥಾಲಯ ವೀಕ್ಷಿಸಿದರು. ಗ್ರಂಥಾಲಯದಲ್ಲಿನ ಪುಸ್ತಕಗಳ ಶೇಖರಣೆ ವ್ಯವಸ್ಥೆ ಶ್ಲಾಘಿಸಿ, ತಾವು ಒಂದಿಷ್ಟೂ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪಿ.ಡಿ.ಓ ಶೈಲಾ ಎಸ್ ಪೂಜಾರಿ, ಕೋಟ ಕಂದಾಯ ನಿರೀಕ್ಷಕ ರಾಜು, ಗ್ರಾಮ ಕರಣಿಕರಾದ ಚೆಲುವರಾಜ್, ಗ್ರಾಮ ಸಹಾಯಕ ರಾಜು, ಗ್ರಂಥಾಲಯ ಮೇಲ್ವಿಚಾರಕಿ ಶೈಲಜ ಕೆ.ಎನ್, ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

seventeen − ten =