ಕಾರಂತರ ಬದುಕು ಒಂದು ದಂತಕಥೆ: ಜಯಂತ್ ಕಾಯ್ಕಿಣಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಕಾರಂತರು ಬದುಕು ಒಂದು ದಂತಕಥೆಯಾಗಿದ್ದು, ಅವರ ಹೊಸತನದ ತುಡಿತ ಅವರ ಬದುಕಿನ ಒಂದು ವೈಶಿಷ್ಟ್ಯ, ಅವರ ಕೈಕೊಳ್ಳುತ್ತಿದ್ದ ಪ್ರವಾಸಗಳಲ್ಲಿ ಸಂಶೋಧಕರರಾಗಿ ಹೊಸತನದ ಅನ್ವೇಷಕರಾಗಿ ಬದುಕಿದವರು. ಕಾರಂತರು ವಿದ್ಯಾರ್ಥಿಗಳಿಗಾಗಿ ಸಮಯವನ್ನು ಕೊಡುತ್ತಿದ್ದು ಶಾಲಾ ಪ್ರವಾಸದಲ್ಲಿ ಅವರ ಅನುಭವನ್ನು ಅವರಲ್ಲಿ ತುಂಬಿ ಜ್ಞಾನಾರ್ಜನೆಯ ಸೂರ್ಯನಂತೆ ಮೂಡುತ್ತಿದ್ದರು. ಕಾರಂತರ ಸಿಡಿಮಿಡಿ ಕಾರಂತರ ಮೌಲ್ಯಗಳ ಒಂದು ಅಂಗವೇ ಸರಿ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಅವರು ಹೇಳಿದರು.

Call us

Call us

ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ17ನೇ ವರುಷದ ಸಂಭ್ರಮದ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ನುಡಿ ಚೇತನದಲ್ಲಿ ಮಾತನಾಡುತ್ತಿದ್ದರು.

Call us

Call us

ಕಾರಂತರು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟ ಕವಿ ಹೃದಯಿ, ಸಮಯ ಪಾಲನೆಯಲ್ಲಿ ಅವರಿಗಿದ್ದ ನಿಷ್ಠೆ ನಮಗೆ ಮಾದರಿ, ಯಕ್ಷಗಾನಕ್ಕೆ ಕಾರಂತರು ಜೀವಂತ ಕಲೆ ಎಂದು ವಿಶೇಷ ಮಹತ್ವ ನೀಡುತ್ತಿದ್ದರು ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಪರಂಪರೆಯನ್ನು ಮರೆಯುತ್ತಿರುವುದು ವಿಷಾದನೀಯ, ಬಾಲವನದಲ್ಲಿ ಮಕ್ಕಳಿಗೆ ನೇರ ಪ್ರಕೃತಿ ಜೊತೆ ಬೆರೆತು ಪಾಠ ಹೇಳುತ್ತಿದ್ದರು, ಪಾರದರ್ಶಕ ಬದುಕಿಗೆ ಕಾರಂತರೇ ನಿದರ್ಶನ ಎಂದು ಹೇಳಿದರು.

ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸತೀಶ್ ವಡ್ಡರ್ಸೆ ನಿರೂಪಿಸಿ ಕಾರ್ಯದರ್ಶಿ ನರೇಂದ್ರ ಕುಮಾರ್ ವಂದಿಸಿದರು.

Leave a Reply

Your email address will not be published. Required fields are marked *

one × 4 =