ಕಾರ್ಟೂನು ಹಬ್ಬ: ಚಿತ್ರನಿಧಿ ಕಾರ್ಯಕ್ರಮಕ್ಕೆ ಚಾಲನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವ್ಯಂಗ್ಯಚಿತ್ರಕಾರರಲ್ಲಿ ವಿಶೇಷವಾದ ಪ್ರತಿಭೆಯಿದ್ದು, ಅವರ ಸಮಾಜವನ್ನು ಭಿನ್ನವಾದ ಆಯಾಮದಿಂದ ನೋಡಿ ರೇಖೆಗಳ ಮೂಲಕ ತಮ್ಮ ಆಲೋಚನೆಯನ್ನು ಹರಿಬಿಡುತ್ತಾರೆ ಎಂದು ಖ್ಯಾತ ಸ್ತ್ರೀ ರೋಗ-ಹೆರಿಗೆ ತಜ್ಞೆ ಡಾ. ಪ್ರಮೀಳಾ ನಾಯಕ್ ಹೇಳಿದರು.

Call us

Call us

Call us

ಇಲ್ಲಿನ ಕಲಾಮಂದಿರದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಟೂನು ಹಬ್ಬದಲ್ಲಿ ಸೈಂಟ್ ಮೇರಿಸ್ ಶಾಲೆ ೧೯೮೫-೮೬ ಬ್ಯಾಚ್ ಹಳೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಕ್ಯಾರಿಕೇಚರ್ ಚಿತ್ರಿಸಿ ಸೈಂಟ್ ಮೇರಿಸ್ ಕನ್ನಡ ಮಾಧ್ಯಮ ಶಾಲೆಗೆ ನಿಧಿ ಸಂಗ್ರಹಿಸುವ ಕಾರ್ಯಕ್ರಮ ಚಿತ್ರನಿಧಿಗೆ ಚಾಲನೆ ನೀಡಿ ಮಾತನಾಡಿದರು.

Call us

Call us

ಕಾರ್ಯಕ್ರಮದಲ್ಲಿ ಅಬುದಾಬಿ ಪ್ರೊಗ್ರೆಸ್ಸಿವ್ ಟೆಕ್ನಾಲಜಿ ಸರ್ವಿಸಸ್‌ನ ಮಹಮ್ಮದ್ ಅನ್ಸಾರ್, ವರದಿಗಾರ ಚಂದ್ರಶೇಖರ ಬೀಜಾಡಿ ಉಪಸ್ಥಿತರಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಜಯಶಂಕರ್ ಮಾರ್ಲ ಹಾಗೂ ಖ್ಯಾತ ಮೂತ್ರಪಿಂಡತಜ್ಞ ಡಾ. ಇಸ್ತಿಯಾಕ್ ಅವರನ್ನು ಗೌರವಿಸಲಾಯಿತು. ಕಾರ್ಟೂನಿಷ್ಠ್ ಸತೀಶ್ ಆಚಾರ‍್ಯ ಅವರು ಡಾ. ಪ್ರಮೀಳಾ ನಾಯಕ್ ಅವರ ಪ್ರಥಮ ಲೈವ್ ಕ್ಯಾರಿಕೇಚರ್ ಚಿತ್ರಿಸಿದರು. ವಕೀಲ ರವಿಕುಮಾರ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

15 + nine =