ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಂಗಳೂರು ವಿ.ವಿ. ತಂಡವನ್ನು ಪ್ರತಿನಿದಿಸಿ ಉತ್ಕೃಷ್ಟ ಸಾಧನೆಗೈದ ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ದಿನಕರ- ತೃತೀಯ ಬಿ.ಕಾಂ. ’ಬಿ’ (ಸಾಫ್ಟ್ಬಾಲ್), ಶಶಿಕಾಂತ್ ಶೆಟ್ಟಿ, ತೃತೀಯ ಬಿ.ಸಿ.ಎ. (ಸಾಫ್ಟ್ಬಾಲ್), ಸುಷ್ಮಾ , ತೃತೀಯ ಬಿ.ಸಿ.ಎ. (ಸಾಫ್ಟ್ಬಾಲ್), ಸುಕನ್ಯಾ ಶೆಟ್ಟಿ, ತೃತೀಯ ಬಿ.ಕಾಂ. ’ಸಿ’ ( ಚೆಸ್ – ವಿ.ವಿ. ತಂಡದ ನಾಯಕಿ), ರೂಪಾ ಶೆಟ್ಟಿ, ದ್ವಿತೀಯ ಬಿ.ಕಾಂ. ’ಬಿ’ (ಚೆಸ್), ಶ್ರಾವ್ಯ – ದ್ವಿತೀಯ ಬಿ.ಕಾಂ. ’ಸಿ’, ಸುಬ್ರಹ್ಮಣ್ಯಾ – ಪ್ರಥಮ ಬಿ.ಕಾಂ. ’ಡಿ’ (ನೆಟ್ಬಾಲ್ ಮತ್ತು ಕುಸ್ತಿಯಲ್ಲಿ ರಜತ ಪದಕ) ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮುಖ್ಯ ಅತಿಥಿಗಳಾದ ಕುಂದಾಪುರ ನ್ಯೂ ಮೆಡಿಕಲ್ನ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಕಂದಾವರ, ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಪ್ರೊ. ಎ.ಪಿ. ಮಿತಂತ್ತಾಯ, ಆಡಳಿತ ಮಂಡಳಿಯ ಸದಸ್ಯರುಗಳಾದ ವಿನತಾ ಪಿ. ರೈ, ಅರುಣ್ ಕುಮಾರ್ ಶೆಟ್ಟಿ, ಕಾಲೇಜಿನ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್, ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್. ಉಪಸ್ಥಿತರಿದ್ದರು.