ಕಾಲ್ತೋಡು: ಸಂತೆ ಮಾರುಕಟ್ಟೆ ಸಂಕೀರ್ಣ ಲೋಕಾರ್ಪಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾಲ್ತೋಡು ಗ್ರಾಮಸ್ಥರ ಹಲವು ವರ್ಷದ ವಾರದ ಸಂತೆಯ ಕನಸು ಇಂದು ನನಸಾಗಿದೆ. ಇದಕ್ಕೆ ಸ್ಥಳೀಯ ಗ್ರಾಪಂ ಕೂಡಾ ಕೈಜೋಡಿಸಿದ್ದು, ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿಕೊಟ್ಟಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತಾಗ ಮಾತ್ರ ನಿರ್ಮಾಣದ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ ಎಂದು ತಾಲೂಕು ಪಂಚಾಯತ್ ಸದಸ್ಯ ಹೆಚ್. ವಿಜಯ್ ಶೆಟ್ಟಿ ಹೇಳಿದರು.

Click Here

Call us

Call us

ಕಾಲ್ತೋಡು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಾಗೊಂಡ ನೂತನ ಮಾರುಕಟ್ಟೆ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಯುವಜನತೆ ಸಮಾಜದ ಹಾಗೂ ಊರಿನ ಅಭಿವೃದ್ಧಿಯ ಪರ ದಿಕ್ಕು ಬದಲಾಯಿಸುವ ಉದ್ದೇಶದಿಂದ ಹಾಗೂ ಪರಿಸರದಲ್ಲಿರುವವರಿಗೆ ವಾರಕ್ಕೊಮ್ಮೆ ಅಗತ್ಯವಸ್ತುಗಳು ಒಂದೇ ಕಡೆಯಲ್ಲಿ ಲಭ್ಯವಾಗಬೇಕೆಂಬ ನೆಲೆಯಲ್ಲಿ ಗ್ರಾಪಂ ವಾರದ ಸಂತೆ ಪ್ರಾರಂಭಿಸಿದೆ. ಇದು ಈ ಭಾಗದ ಜನತೆಗೆ ನೀಡಿದ ಕೊಡುಗೆಯಾಗಿದೆ ಎಂದ ಅವರು ವಾರದ (ಪ್ರತೀ ಗುರುವಾರ) ಸಂತೆಗೆ ಬರುವ ವ್ಯಾಪಾರಸ್ಥರಿಗೆ ಒಂದು ವರ್ಷದ ತನಕ ಪಂಚಾಯತ್ ಯಾವುದೇ ರೀತಿಯ ತೆರಿಗೆ, ಸುಂಕವನ್ನು ವಿಧಿಸುವುದಿಲ್ಲ. ಇದನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ ಎಂದು ಘೋಷಿಸಿದರು. ಆದರೆ ಮಾರುಕಟ್ಟೆ ಪ್ರದೇಶವನ್ನು ಸಂಪೂರ್ಣ ಸ್ವಚ್ಛತೆಯಾಗಿಡುವಲ್ಲಿ ಎಲ್ಲರೂ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Click here

Click Here

Call us

Visit Now

ಶ್ರೀ ಮಹಾಲಸಾ ಮಾರಿಕಾಂಬಾ ದೇವಸ್ಥಾನದ ಅರ್ಚಕ ರಾಮಯ್ಯ ಪೂಜಾವಿಧಿಗಳನ್ನು ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ಬಿ ಅಣ್ಣಪ್ಪ ಶೆಟ್ಟಿ, ಉಪಾಧ್ಯಕ್ಷ ರಾಜು ಪೂಜಾರಿ, ಸರ್ವ ಸದಸ್ಯರು, ಪಿಡಿಒ ಸತೀಶ್ ತೋಳಾರ್, ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ವಿನಾಯಕ ಮೇರ್ಟ ಸ್ವಾಗರಿಸಿ, ಗಿರೀಶ್ ಶ್ಯಾನುಭಾಗ್ ವಂದಿಸಿದರು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಇತಿಹಾಸದ ಪ್ರಥಮ ವಾರದ ಸಂತೆಗೆ ಸಾಕ್ಷಿಯಾದರು.

Leave a Reply

Your email address will not be published. Required fields are marked *

9 − six =