ಕಿರಿಮಂಜೇಶ್ವರ: ಶುಭದಾ ಯು.ಕೆ.ಜಿ. ವಿದ್ಯಾರ್ಥಿಗಳ ಘಟಿಕೋತ್ಸವ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯು.ಕೆ.ಜಿ. ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಉದ್ಘಾಟಕರಾಗಿ ಆಗಮಿಸಿದ ಖಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ ಪ್ರತಿಯೊಂದು ಮಗುವು ದೇವರುಕೊಟ್ಟ ವರ, ಮಕ್ಕಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕೊಡಬೇಕಾಗಿದೆ. ಅವರ ಬುದ್ಧಿಮತ್ತೆಯ ಕುರಿತು ಶಿಕ್ಷಕರು ಹಾಗೂ ಪೋಷಕರಿಗೆ ಅರಿವಿರಬೇಕು. ಅಂಕಗಳಿಂದ ವಿದ್ಯಾರ್ಥಿಗಳ ಬುದ್ಧಿವಂತಿಕೆ ಅಳೆಯದೆ, ಅವರನ್ನು ಸರ್ವತೋಮುಖವಾಗಿ ಪ್ರತಿಭಾವಂತರಾಗುವಂತೆ ಮಾಡಬೇಕು. ಮಕ್ಕಳಿಗೆ ಪ್ರೀತಿಯ ಸ್ಪರ್ಶ ನೀಡಿ ಅವರನ್ನು ಆದರದಿಂದ ನಡೆಸಿಕೊಳ್ಳಬೇಕು ಗುರುಹಿರಿಯರಿಗೆ ಗೌರವಕೊಡುವುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಶಿಕ್ಷಣವೆಂಬುದು ಹಣಕೊಟ್ಟು ಖರೀದಿಸುವ ಸರಕಲ್ಲ. ಅದು ವಿದ್ಯಾರ್ಥಿಗಳು ಶ್ರಮಪಟ್ಟು ಅಧ್ಯಯನ ಮಾಡಿದಾಗ ದೊರೆಯು ಜ್ಞಾನ ಸಂಪತ್ತು ಎಂದರು.

Call us

Call us

Visit Now

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮರವಂತೆಯ ಖ್ಯಾತ ವೈದ್ಯೆ ಡಾ. ರೂಪಶ್ರೀ ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಇಂದಿನ ಶಿಕ್ಷಣದ ಜೊತೆಗೆ ದೈಹಿಕ, ಮಾನಸಿಕ, ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮುಖ್ಯ ಎಂದರು ಮತ್ತು ಶುಭದಾ ಶಿಕ್ಷಣ ಸಂಸ್ಥೆಯವರು ಆಯೋಜಿಸಿರುವ ಕಿಂಡರ್ ಗಾರ್ಟನ್ ಘಟಿಕೋತ್ಸವದ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

Click here

Call us

Call us

ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ.ಎನ್.ಕೆ.ಬಿಲ್ಲವರು ಪುಟಾಣಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಶಾಲಾ ನಿರ್ದೇಶಕರಾದ ಕೆ. ಪುಂಡಲೀಕ ನಾಯಕ್, ಸಂಯೋಜಕಿ ಗೀತಾದೇವಿ ಅಡಿಗ, ಸಂಚಾಲಕ ಶಂಕರ ಪೂಜಾರಿ, ಹಿರಿಯ ಅಧ್ಯಾಪಕ ಯು. ರಾಜಾರಾಮ್ ಭಟ್, ಸಲಹಾಸಮಿತಿಯ ಸದಸ್ಯರಾದ ಶೇಖರ್ ಪೂಜಾರಿ, ರಾಜೀವ್‌ಶೆಟ್ಟಿ, ಮಂಜು ಪೂಜಾರಿ, ಹಿತೈಶಿಗಳಾದ ಬಿ.ಎ ಹಂಝ ಉಪಸ್ಥಿತರಿದ್ದರು.

ಆರಂಭದಲ್ಲಿ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟಿ.ಎ.ನಯಾಝುನ್ನೀಸಾ, ಪ್ರಭಾವತಿ, ಆಯಿಶಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ವಂದನಾರ್ಪಣೆಗೈದರು.

Leave a Reply

Your email address will not be published. Required fields are marked *

12 + eight =