ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದಲ್ಲಿ ಪ್ರಪ್ರಥಮ ಭಾರಿಗೆ ೪ಜಿ ನೆಟ್ವರ್ಕ್ ಸೇವೆ ಕಲ್ಪಿಸಿದ ಖ್ಯಾತಿ ಹೊಂದಿರುವ ಐಡಿಯಾ ನೆಟ್ವರ್ಕ್, ತಮ್ಮ ಸೇವೆಗಾಗಿ ಕುಂದಾಪುರದ ಮುಖ್ಯರಸ್ತೆಯ ಪಾರಿಜಾತ ಸರ್ಕಲ್ ಬಳಿ ಸಿಎಸ್ಐ ಕಾಂಪ್ಲೆಕ್ಸ್ನಲ್ಲಿ ಶುಬಾರಂಭಗೊಂಡಿದೆ.
ಕುಂದಾಪುರ ಠಾಣಾಧಿಕಾರಿ ನಾಸಿರ್ ಹುಸೇನ್ ಐಡಿಯಾ ಪಾಯಿಂಟ್ ಉದ್ಘಾಟಿಸಿ ಮಾತನಾಡಿ ಸಂಸ್ಥೆಯ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿ ಸಮಾಜ ಸೇವಕ ಅಬು ಮಹಮ್ಮದ್ ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಕೀಲ ರಾಮದಾಸ್, ಐಡಿಯಾ ಸಂಸ್ಥೆಯ ಎ.ಎಸ್.ಎಮ್ ವಿನಯ್ ಶ್ರಿರಂಗ್, ಸೇಲ್ಸ್ ಮೆನೆಜರ್ ರೊಯ್ಸನ್ ಡಿಸೋಜಾ, ಐಡಿಯಾ ಪಾಯಿಂಟ್ ಮಾಲಕ ಮುಸ್ತಾಫ್ ಹಾಗೂ ಮೊಬೈಲ್ ಎಕ್ಸ್, ಮೊಬೈಲ್ ಎಕ್ಸ್ ಪ್ಯಾಲೇಸ್ ಮತ್ತು ಪೂಟ್ ಎಕ್ಸ್ನ ಎಲ್ಲಾ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು. ಐಡಿಯಾ ಸಂಸ್ಥೆಯ ಟ್ರೈನರ್ ಗಂಗಾಧರ್ ಕಾಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.