ಕುಂದಾಪುರ: ಕೇಕ್‌ವಾಲ, ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಹಾರದಲ್ಲಿ ಗುಣಮಟ್ಟ, ಗ್ರಾಹಕರ ಬಗೆಗೆ ಕಾಳಜಿ, ಸ್ವಚ್ಛತೆ ಹಾಗೂ ಕೈಗೆಟಕುವ ದರ ಈ ಸೂತ್ರಗಳಿಂದ ಕಳೆದ 45 ವರ್ಷಗಳಿಂದ ಆಹಾರೋದ್ಯಮ ಕ್ಷೇತ್ರದಲ್ಲಿ ಗೋಪಾಡಿ ಶ್ರೀನಿವಾಸ ರಾವ್ ಅವರು ಯಶಸ್ಸು ಕಾಣಲು ಸಾಧ್ಯವಾಗಿದೆ. ಕುಂದಾಪುರದಲ್ಲಿಯೂ ಆರಂಭಿಸಲಾಗಿರುವ ಅವರ ಉದ್ಮವೂ ಯಶಸ್ಸು ಗಳಿಸಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಪ್ರಾಯ ಪಟ್ಟರು.

Click Here

Call us

Call us

ಮಯೂರ ಸಮೂಹ ಸಂಸ್ಥೆಗಳು ಕುಂದಾಪುರ ಪುರಸಭಾ ರಸ್ತೆಯಲ್ಲಿರುವ ಜಿ.ಎಸ್.ಆರ್ ಸ್ಕ್ವೇರ್ನ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಆರಂಭಿಸಿದ ಕೇಕ್‌ವಾಲ ಮತ್ತು ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ಸಂಸ್ಥೆಗಳನ್ನು ಉದ್ಘಾಟಿಸಿ ಮಾತನಾಡಿದರು.

Click here

Click Here

Call us

Visit Now

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಜಿ.ಎಸ್.ಆರ್ ಸ್ಕ್ವೇರ್ ನಾಮಫಲಕ ಅನಾವರಣಗೊಳಿಸಿದರು. ಕುಂದಾಪುರ ವಿನಯ ಆಸ್ಪತ್ರೆಯ ಡಾ|ಎನ್.ವಿಶ್ವನಾಥ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಶುಭಹಾರೈಸಿದರು.

ಮಯೂರ ಗ್ರೂಫ್ನ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ ಗೋಪಾಡಿ ಶ್ರೀನಿವಾಸ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಆಹಾರೋತ್ಪಾದನೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟ, ಸ್ಥಳೀಯ ತಿಂಡಿ ತಿನಿಸುಗಳಿಗೆ ಒತ್ತು, ಸ್ವಚ್ಛತೆ ಮತ್ತು ಪರಿಶುದ್ದತೆ, ಕೈಗೆಟಕುವ ದರ ಈ ಅಂಶಗಳನ್ನು ನಮ್ಮ ಉದ್ಯಮದಲ್ಲಿ ಬಳಕೆ ಮಾಡಿಕೊಂಡಿದ್ದೇವೆ. ಇಲ್ಲಿ ತೆರೆದಿಟ್ಟ ಪಾಕಶಾಲೆ, ಕಣ್ಣೆದುರೆ ಮಾಡಿಕೊಡುವ ಕೇಕ್‌ಗಳನ್ನುಕೇಕ್‌ವಾಲ ಮತ್ತು ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ವಿಶೇಷತೆಯಾಗಿದೆ. ಆಹಾರ ಉತ್ಪಾದನೆಯಲ್ಲಿ ಹಲವಾರು ತಂತ್ರಜ್ಞಾನಗಳನ್ನು ಬಳಸಿಕೊಂಡಿದ್ದೇವೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಆರ್ಕಿಟೆಕ್ಟ್ ಲಕ್ಷ್ಮೀಶ, ಇಂಜಿನಿಯರ್ ಸುರೇಶ ಹತ್ವಾರ್, ಗೋಪಾಲ್ ಭಟ್, ದಿವಿತ್, ಸತೀಶ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಉದ್ಯಮಿಗಳು, ಗಣ್ಯರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಅಮೃತ್ ಕುಮಾರ್ ತೌಳ, ನಿರ್ದೇಶಕರಾದ ಕೆ. ಸುಬ್ಬಣ್ಣ ಉಪಾಧ್ಯ, ಬಿ. ವೆಂಕಟೇಶ್ ವರ್ಣ, ಜಗದೀಶ್ ಎಸ್. ಹತ್ವಾರ್, ಎಚ್. ಎಸ್. ಮಹೇಶ ಹತ್ವಾರ್, ಮಾನಸ ಸುಶಾಂತ್ ಅತಿಥಿಗಳನ್ನು ಗೌರವಿಸಿದರು.

Call us

ಸುಮಿತ್ರಾ ಮತ್ತು ಭಾರತಿ ರಾಮಕೃಷ್ಣ ದಾಸ್ ಪ್ರಾರ್ಥಿಸಿದರು. ಸಿಇಓ ಕೆ. ಎಸ್. ಸುಹಾಸ್ ಉಪಧ್ಯಾಯ ಸ್ವಾಗತಿಸಿ, ವಂದಿಸಿದರು. ನ್ಯಾಯವಾದಿ ರಾಘವೇಂದ್ರ ಚರಣ ನಾವಡ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

6 − 5 =