ಕುಂದಾಪುರದಲ್ಲಿ ತೆರಾಲಿ ಹಬ್ಬ – ದೇವರ ವಾಕ್ಯದ ಭಕ್ತಿ ಸಂಭ್ರಮ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಹಬ್ಬ ಸಂಭ್ರಮದಿಂದ ಜರಗಿತು. ದೇವರ ವಾಕ್ಯದ ಭಕ್ತಿಯ ದೇವರ ವಾಕ್ಯದ ಭಕ್ತಿಯ ಪೂಜಾ ವಿಧಿಯಿಂದ ಆರಂಭಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತು

Call us

Call us

Click Here

Visit Now

ಜೀವನವೆಂಬ ನಾವೆಗೆ, ದೇವರ ವಾಕ್ಯವೆ ಆಧಾರ ಎಂಬ ಧ್ಯೇಯ ವಾಕ್ಯದ ಈ ಪೂಜಾ ವಿಧಿಯನ್ನು ತಲ್ಲೂರು ಇಗರ್ಜಿಯ ಧರ್ಮಗುರು ವಂ| ವಿಕ್ಟರ್ ಡಿಸೋಜಾ ನೆಡೆಸಿ ಕೊಟ್ಟು, ನಾವೆಯು ಸುರಕ್ಷಿತವಾಗಿ ಮುನ್ನಡೆಯ ಬೇಕಿದ್ದರೆ ಅದಕ್ಕೆ ಚಾಲಕನ ಮಾರ್ಗದರ್ಶನ ಬೇಕಾಗುತ್ತದೆ, ಹಾಗೇ ನಾವು ಜೀವನದಲ್ಲಿ ಮುನ್ನಡೆಯ ಬೇಕಾದರೆ ಪವಿತ್ರ ಧರ್ಮ ಗ್ರಂಥ, ಅದರಲ್ಲಿರುವರ ದೇವರ ವಾಕ್ಯಗಳು ನಮಗೆ ಮಾರ್ಗದರ್ಶನ ನೀಡುತ್ತದೆ. ಬಾಳಲ್ಲಿ ನೀವು ಪರಿವರ್ತನೆಗೊಳ್ಳಬೇಕು. ನಮ್ಮ ಜೀವನದಲ್ಲಿ ಎಸ್ಟು ಸಾಧನೆ ಮಾಡಿದರೂ, ಬಡವರ ಕಣ್ಣಿರನ್ನು ಒರೆಸಲಿಕ್ಕಾಗದಿದ್ದರೆ ನಿಮ್ಮ ಸಾಧನೆ ವ್ಯರ್ಥ ಎಂದು ಅವರು ಸಂದೇಶ ನೀಡಿದರು

Click here

Click Here

Call us

Call us

ಕಲ್ಯಾಣಪುರ ವಲಯ ಪ್ರಧಾನ, ಕಲ್ಯಾಣಪುರ ಕಾಥೆಡ್ರಾಲನ ರೆಕ್ಟರ್ ಧರ್ಮಗುರು ವಂ| ಸ್ಟ್ಯಾನಿ ಬಿ.ಲೋಬೊ, ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್ ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯದರ್ಶಿ ಧರ್ಮಗುರು ವಂ|ಲಾರೆನ್ಸ್ ಡಿಸೋಜಾ, ಉಡುಪಿ ಧರ್ಮಪ್ರಾಂತ್ಯದ ಪಿ.ಅರ್.ಒ. ಧರ್ಮಗುರು ವಂ| ಡೆನಿಸ್ ಡೆಸಾ, ಧಾರ್ಮಿಕ ಎಪಿಸ್ಕೊಪಲ್ ಧರ್ಮಗುರು ವಂ| ಜೋನ್ ಪಿಯುಸ್ ಡಿಸೋಜಾ, ಕುಂದಾಪುರ ಇಗರ್ಜಿಯ ಹಾಗೂ ವಲಯ ಪ್ರಧಾನರಾದ ವಂ|ಅನಿಲ್ ಡಿಸೋಜಾ, ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವ| ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ ಹೆಚ್ಚಿನ ಇಗರ್ಜಿಗಳ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು.

ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷ ಜೋನ್ಸನ್ ಆಲ್ಮೇಡಾ ವಂದಿಸಿದರು. ಕಾರ್ಯದರ್ಶಿ ಫೆಲ್ಸಿಯಾನ್ ಡಿ ಸೋಜಾ, ಸದಸ್ಯರು, ಗುರಿಕಾರರು, ಧರ್ಮ ಬಗಿನಿಯರು ಉಪಸ್ಥಿತರಿದ್ದರು.

news-kundapura-terali-habba1

Leave a Reply

Your email address will not be published. Required fields are marked *

5 × three =