ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ನದಿಗಳು ತುಂಬಿ ಹರಿಯುತ್ತಿದೆ.
ತಾಲೂಕಿನ ಸೌಪರ್ಣಿಕಾ, ವಾರಾಹಿ, ಚಕ್ರಾ ಸೇರಿದಂತೆ ಪಂಚಗಂಗಾವಳಿ ನದಿಗಳು ಹಾಗೂ ಉಪನದಿಗಳು ತುಂಬಿ ಹರಿಯುತ್ತಿದ್ದು, ನಾವುಂದದ ಸಾಲ್ಬುಡ ಸೇರಿದಂತೆ ಕೆಲವೆಡೆ ತಗ್ಗು ಪ್ರದೇಶಗಳು ನೆರೆಯಿಂದ ಆವರಿಸಿದೆ.