ಕುಂದಾಪುರದ ಮುದೂರಿನಲ್ಲಿ ನೂರಾರು ಎಕ್ರೆ ದಲಿತರ ಭೂಮಿ ಕಬಳಿಕೆ

Call us

Call us

ಕುಂದಾಪುರ : ಮುದೂರು ಗ್ರಾಮದ ಸರ್ವೆ ನಂಬರ್ 63 ರಲ್ಲಿ ಸುಮಾರು 362 ಎಕ್ರೆ ದಲಿತರಿಗೆ ಮೀಸಲಿಟ್ಟ ಸರಕಾರಿ ಭೂಮಿ ಕಬಳಿಕೆ ಮಾಡಿರುವ ಬಾರಿ ಭೂ ಹಗರಣ ಬೆಳಕಿಗೆ ಬಂದಿದ್ದು, ಬೈಂದೂರು ವಿಶೇಷ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Click here

Click Here

Call us

Call us

Visit Now

Call us

Call us

ಭೂಮಾಲಿಕರೊಬ್ಬರು 400 ಎಕ್ರೆ ಖಾಸಗಿ ಭೂಮಿ ಖರಿದಿಸುವ ನೆಪದಲ್ಲಿ ಬಡ ದಲಿತ, ಅಲ್ಪಸಂಖ್ಯಾತ ಹಾಗೂ ಇತರ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ಮೀಸಲಿಟ್ಟ 362ಎಕ್ರೆ ಸರಕಾರಿ ಭೂಮಿ ವಶಪಡಿಸಿ ಕೊಂಡಿರುವುದು ಖಚಿತಪಟ್ಟದೆ, ಮುದೂರು ಗ್ರಾಮದ ಸರ್ವೆ ನಂಬರ್ 63 ರಲ್ಲಿ 362 ಎಕ್ರೆ ಭೂಮಿ ಸರಕಾರಿ ಹೆಚ್ಚುವರಿ ಭೂಮಿಯೆಂದು ಪರಿಗಣಿಸಿ 1982-83 ರಲ್ಲಿ ಬಡ ದಲಿತ,ಮತ್ತು ಇತರ ಹಿಂದುಳಿದ ವರ್ಗದ 59 ಬಡ ಕುಟುಂಬಗಳಿಗೆ ಮಂಜೂರು ಗೊಳಿಸಲಾಗಿತ್ತು ಮಂಜೂರಾದ ಭೂಮಿಗೆ ಹಕ್ಕು ಪತ್ರ ನೀಡಬೇಕಾಗಿದ್ದ, ಇಲಾಖೆಯ ನಿರ್ಲಕ್ಷೆಯಿಂದ ಪಶ್ಚಿಮಘಟ್ಟದ ದಟ್ಟವಾದ ಅರಣ್ಯ ಪ್ರದೇಶವಾಗಿರುದರಿಂದ ಕ್ರೃಷಿಗೆ ಯೋಗ್ಯವಲ್ಲದ ಭೂಮಿಯೆಂದು ಪರಿಗಣಿಸಿ ಮಂಜೂರಾತಿಯನ್ನು ತಾತ್ಕಲಿಕವಾಗಿ ತಡೆಹಿಡಿಯಲಾಗಿತ್ತು,

ಇದೀಗ ಖಾಸಗಿ ಭೂಮಿ ಖರಿದಿಸುವ ಹೆಸರಿನಲ್ಲಿ ೫೯ ಬಡ ಕುಟುಂಬಗಳಿಗೆ ಮೀಸಲಿಟ್ಟ ನೂರಾರು ಎಕ್ರೆ ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ್ದಲ್ಲದೆ ಕೋಟ್ಯಾಂತರ ರೂಪಾಯಿ ಬಲೆಬಾಳುವ ಮರಗಳನ್ನು ಕಡಿದು ನಾಶ ಮಾಡಲಾಗಿದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳಾಗಲಿ, ಜವಬ್ದಾರಿಯುತ ಜನ ಪ್ರತಿನಿದಿಗಳಾಗಲಿ ಇಷ್ಟೊಂದು ಭಾರಿ ಭೂಹಗರಣ ನಡೆದಿದ್ದರೂ ದ್ವನಿಯೆತ್ತದೆ ಇರುದು ಹಲವು ಸಂಶಯಗಳಿಗೆ ಕಾರಣವಾಗಿದೆ ಕನಾ೯ಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಳೆದ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟ ಸಚಿವರುಗಳಿಗೆ ದಲಿತ ಕುಂದುಕೊರತೆಗಳ ಸಭೆಯಲ್ಲಿ ಮನವಿ ನೀಡಲಾಗಿದ್ದು ಅಗತ್ಯ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯತೋರುತ್ತಿರುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಆಕ್ರೋಶವ್ಯಕ್ತಪಡಿಸಿದ್ದರು.

ಮಲೆನಾಡ ತಪ್ಪಲಿನಲ್ಲಿ ತಮ್ಮ ಬದುಕನ್ನ ಕಟ್ಟಕೊಂಡು ಬದುಕುವ ಬಡಜನರ ಹಕ್ಕನ್ನು ಈ ರೀತಿಯಾಗಿ ನಿರ್ಲಕ್ಷ್ಯ ತೋರಿದಲ್ಲಿ ತಕ್ಷಣವೇ ದಲಿತರ ಭೂಮಿ ಅತಿಕ್ರಮಣ ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟವನ್ನು ಮಾಡಲಾಗುದೆಂದು ಕರ್ನಾಟಕ ರಾಜ್ಯ ದಲಿತ ಸಂಘಷ೯ ಸಮಿತಿ ಉಡುಪಿ ಜಿಲ್ಲಾ ಸಮಿತಿ ಮುಖಂಡ ವಾಸುದೇವ ಮುದೂರು, ಮಂಜುನಾಥ ಗಿಳಿಯಾರು, ಶಾಮ್ ರಾಜ್ ಬಿತಿ೯, ಜೈಯನ್ ಮಲ್ಪೆ, ರಾಜೀನಾಮೆ ಬೆಟ್ಟಿನ ಮನೆ.ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಮುದೂರಿನಲ್ಲಿ ದಲಿತ ಮೀಸಲು ಭೂಮಿ ಬಗ್ಗೆ ವಿಜಯವಾಣಿ ವರದಿ ಮಾಡಿತ್ತು.

Leave a Reply

Your email address will not be published. Required fields are marked *

twenty + sixteen =