ಕುಂದಾಪುರದ ರಾಕ್‌ಸ್ಟಾರ್ ಖ್ಯಾತಿಯ ವೈಕುಂಠ ನಿಧನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಪೇಟೆಯಲ್ಲಿ ತನ್ನ ಹಾಡು, ವಿಭಿನ್ನ ಸಂಗೀತದ ಪ್ರಸ್ತುತಿಯ ಮೂಲಕವೇ ಗುರುತಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ಮೆಚ್ಚುಗೆಗೆ ಪಾತ್ರವಾಗಿದ್ದ ವೈಕುಂಠ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Call us

ಬಹು ಅಂಗಾಂಗ ವೈಫಲ್ಯ ಹಾಗೂ ವಿಪರೀತ ಕುಡಿತದ ಗೀಳಿಗೆ ಒಳಗಾಗಿದ್ದ ವೈಕುಂಟ ಅನಾರೋಗ್ಯದಿಂದ ಕುಂದಾಪುರದ ಶಾಸ್ತ್ರೀವೃತ್ತದ ಬಳಿಯೇ ಬಿದ್ದಿದ್ದ ಆತನನ್ನು ಸಾರ್ವಜನಿಕರು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿ ಚಿಕಿತ್ಸೆ ಸ್ಪಂದಿಸದೇ ಕೊನೆಯುಸಿರೆಳಿದಿದ್ದಾನೆ.

Call us

ತನ್ನ ಸಿನೆಮಾ, ಜನಪದ ಹಾಡು ಹಾಗೂ ಹಾಡಿಗೆ ತಕ್ಕಂತೆ ಕೈಗೆ ಸಿಕ್ಕ ಪರಿಕಗಳಿಂದಲೇ ರಿದಂ ನೀಡುತ್ತಾ ಕುಂದಾಪುರದಲ್ಲಿ ಪ್ರಸಿದ್ಧ ಪಡೆದಿದ್ದ ವೈಕುಂಠ ಸಾಮಾಜಿಕ ಜಾಲತಾಣಗಳಿಂದಾಗಿ ಮತ್ತಷ್ಟು ಪ್ರಸಿದ್ಧಿ ಪಡೆದಿದ್ದ. ತನ್ನ ಕುಟುಂಬದಿಂದ ದೂರ ಉಳಿದಿದ್ದ ವೈಕುಂಠ ಕ್ರಮೇಣ ಹಾಡಿಗಾಗಿ ಪಡೆದ ಹಣದಿಂದ ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದ. ಆತ ಅನಾರೋಗ್ಯಕ್ಕೆ ಒಳಗಾದಾಗಲೇ ಜಾಲತಾಣಗಳನ್ನು ಆತನನ್ನು ಮನೋರಂಜನೆಯ ವಸ್ತುವಾಗಿ ಉಪಯೋಗಿಸಿಕೊಂಡವರೂ ಕೂಡ ಸ್ಪಂದಿಸದಿದ್ದದು ದುರಂತ.

Leave a Reply

Your email address will not be published. Required fields are marked *

14 − 11 =