ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕುಂದಾಪುರದ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಗರದ ವೈದ್ಯರಾದ ಡಾ. ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್‌ನ ಮುಖಂಡರಾದ ಚಂದ್ರಶೇಖರ ಕಲ್ಪತರು ವೈದ್ಯರನ್ನು ಸನ್ಮಾನಿಸಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮನ್ನು ತಾವು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡ ಬಗ್ಗೆ ಶ್ಲಾಘಿಸಿ ವೈದ್ಯರನ್ನು ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಡಾ. ಚಂದ್ರಶೇಖರ ಮಾತನಾಡಿ, ಈ ವೃತ್ತಿ ಅತೀ ಶ್ರೇಷ್ಠವಾದುದು ಈ ಮಾರಣ ಕೋವಿಡ್ ಸಂದರ್ಭದಲ್ಲೂ ಕೇವಲ ವೈದ್ಯರ ಸೇವೆ ಮಾತ್ರ ಪ್ರಮುಖವಲ್ಲ ಸಾರ್ವಜನಿಕರ ಜವಾಬ್ದಾರಿಯು ಮುಖ್ಯ ಎನ್ನುತ್ತಾ ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಕುಂದಾಪುರದ ಲಯನ್ಸ್ ಕ್ಲಬ್ ಮಾಡಿರುವ ಸೇವಾ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.
ಲಯನ್ಸ್ ಕ್ಲಬ್ ಕುಂದಾಪುರದ ನೂತನ ಅಧ್ಯಕ್ಷರಾದ ರಾಧಾಕೃಷ್ಣ ನಾಯಕ್ ವೈದ್ಯರಿಗೆ ತಮ್ಮ ಶುಭಶಯಗಳನ್ನು ಹೇಳಿದರು. ಲಯನ್ ನವೀನ್ ಕುಮಾರ ಶೆಟ್ಟಿ, ಪ್ರಜ್ಞೇಶ್ ಪ್ರಭು, ಡಾ. ರವೀಂದ್ರ ಉಪಸ್ಥಿತರಿದ್ದರು.