ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ವಿಶೇಷ ಪುಷ್ಪಲಂಕಾರ ಸೇವೆಯು ಭಕ್ತಾಧಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು. ಸುಮಾರು 25 ಸಾವಿರ ರೂ. ಮೌಲ್ಯದ ಮಲ್ಲಿಗೆ ಹೂಗಳಿಂದ ಶ್ರೀ ದೇವಿಯನ್ನು ಅಲಂಕರಿಸಿ, ಮಂಗಳ ವಾದ್ಯ ಘೋಷಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಳದ ಅರ್ಚಕ ಗಣಪತಿ ಸುವರ್ಣ ಪೂಜೆ ನೆರವೇರಿಸಿದರು.
ಕುಂದಾಪುರದ ಶ್ರೀ ಬಗಳಾಂಬ ತಾಯಿಗೆ ವಿಶೇಷ ಪುಷ್ಪಲಂಕಾರ ಸೇವೆ
