ಕುಂದಾಪುರ: ಆರ್.ಎನ್ ಶೆಟ್ಟಿ ಅವರ ಶೃದ್ಧಾಂಜಲಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇಂದು ಬೆಳಗಿನ ಜಾವ ದೈವಾಧೀನರಾದ ಉದ್ಯಮಿ, ಪದ್ಮಭೂಷಣ ಆರ್.ಎನ್.ಶೆಟ್ಟಿ ಅವರಿಗೆ ಚಿರಶಾಂತಿಯನ್ನು ಕೋರಿ ಶೃದ್ಧಾಂಜಲಿ ಸಭೆ ನಡೆಯಿತು.

ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರೇಖಾ ಬನ್ನಾಡಿ ಮಾತನಾಡಿ, ಪದ್ಮಭೂಷಣ ಆರ್.ಎನ್ ಶೆಟ್ಟಿ ಅವರು ಸಮಾಜಕ್ಕೆ ದೇಶಕ್ಕೆ ಮಾದರಿಯಾಗಿ ನಿಂತವರು. ಅನೇಕ ಶಿಕ್ಷಣ ಸಂಸ್ಥೆಗಳು ಅವರ ದೇಣಿಗೆ ಪಡೆದಿವೆ. ಅವರು ಉದ್ಯಮಿ ಅಷ್ಟೇ ಅಲ್ಲದೇ ಸಮಾಜಮುಖಿತಾದ ಜೀವ ಪರಚಿಂತಕರು. ದೇಶವನ್ನು ಕಟ್ಟುವಲ್ಲಿತಮ್ಮ ಕೊಡುಗೆಯನ್ನು ನೀಡಿದವರು. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇವೆ. ಅವರ ಪತ್ನಿಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಾಮಚಂದ್ರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿಕಾಲೇಜಿನ ಪ್ರಧ್ಯಾಪಕರು ಪದ್ಮಭೂಷಣ ಆರ್.ಎನ್.ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಶೃದ್ಧಾಂಜಲಿ ಸಲ್ಲಿಸಿ ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕೋರಲಾಯಿತು.

Leave a Reply

Your email address will not be published. Required fields are marked *

16 − thirteen =