ಕುಂದಾಪುರ: ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

Call us

ಕುಂದಾಪುರ: ಇಲ್ಲಿನ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಯೋರ್ವ ತನ್ನ ಹಾಸ್ಟೆಲ್ ನಲ್ಲಿ ಇಂದು ಮಧ್ಯಾಹ್ನದ ವೇಳೆಗೆ ನೇಣಿಗೆ ಶರಣಾದ ಘಟನೆ ನಡೆದಿದೆ. ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಶಶಾಂಕ್(19) ಮೃತ ಯುವಕ.

ಘಟನೆಯ ವಿವರ:
ತುಮಕೂರು ಜಿಲ್ಲೆಯ ತುರುವೆಕೆರೆ ನಿವಾಸಿಯಾದ ಗೋಪಾಲ ಗೌಡ ಎಂಬುವವರ ಮಗನಾದ ಶಶಾಂಕ್ ತುರುವೆಕೆರೆಯಲ್ಲಿ ಮೆಕ್ಯಾನಿಕ್ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿ ಈ ವರ್ಷ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೇರವಾಗಿ ದ್ವಿತೀಯ ವರ್ಷಕ್ಕೆ ಸೇರ್ಪಡೆಗೊಂಡಿದ್ದರು. ಈಗ ಪರೀಕ್ಷೆಗಳ ನಡೆಯುತ್ತಿದ್ದರಿಂದ ಬೆಳೆಗ್ಗೆಯ ಪರೀಕ್ಷೆಗೆ ಹಾಜರಾಗಿದ್ದ ಶಶಾಂಕ್ ಮಧ್ಯಾಹ್ನದ ಪರೀಕ್ಷೆಗೆ ಹಾಜರಾಗದೇ ತನ್ನ ಹಾಸ್ಟೆಲ್ ಕೊಠಡಿಯಲ್ಲಿಯೇ ಮಧ್ಯಾಹ್ನ 2ಗಂಟೆಯ ತನಕ ಓದುತ್ತಿದ್ದರು ಎನ್ನಲಾಗಿದೆ. ಬಳಿಕ ಕೊಠಡಿಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ. ಇಂದು ಮಧ್ಯಾಹ್ನದ 3:30ರ ವೇಳೆಗೆ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. (ಕುಂದಾಪ್ರ ಡಾಟ್ ಕಾಂ)

Call us

ಆರು ತಿಂಗಳ ಹಿಂದಷ್ಟೇ ತನ್ನ ತಾಯಿ ಮೃತಪಟ್ಟಿದ್ದರಿಂದ ತೀರಾ ನೊಂದುಕೊಂದ್ದ ಶಶಾಂಕ್ ಬರೆದಿಟ್ಟ ಡೆಟ್ ನೋಟ್ ಪೊಲೀಸರಿಗೆ ದೊರೆತಿದ್ದು ತನ್ನ ತಾಯಿ ಕನಸಿನಲ್ಲಿ ಬಂದು ತನ್ನೆಡೆಗೆ ಕರೆಯುತ್ತಿದ್ದಳು ಎಂದು ಬರೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kundapura MIT student commit sucide (2) Kundapura MIT student commit sucide (3) Kundapura MIT student commit sucide (4)

Leave a Reply

Your email address will not be published. Required fields are marked *

1 + 9 =