ಕುಂದಾಪುರ: ಇನ್ನು ಸಾರ್ವಜನಿಕರಿಗೆ ಮಿನಿ ವಿಧಾನಸೌಧದಲ್ಲಿ ಓದಲು ಪತ್ರಿಕೆ ಉಚಿತ

Call us

Call us

ಕುಂದಾಪುರ: ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುವುದು, ಮಡದಿಗೆ ವಿಶೇಷವಾದ ಉಡುಗೊರೆ ನೀಡುವುದು ಇವೆಲ್ಲಾ ಸಾಮಾನ್ಯವಾಗಿ ನಡೆದೇ ನಡೆಯುತ್ತೆ. ಆದರೆ ಇಲ್ಲೊಬ್ಬ ಪತ್ರಿಕಾ ವಿತರಕರು ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಸಾರ್ವಜನಿಕರಿಗೆ ಉಚಿತ ಪತ್ರಿಕೆ ನೀಡಿ ಓದುವ ಹವ್ಯಾಸ ಬೆಳೆಸಲು ಮುಂದಾದದ್ದು ಮಾತ್ರ ವಿಶೇಷ ಸ್ಪಲ್ಪ ವಿಶೇಷ ಅಂದೆನಿಸುತ್ತೆ.

Call us

Call us

Call us

[quote font_size=”16″ bgcolor=”#ffffff” bcolor=”#dd890b” arrow=”yes” align=”right”]* ಆಧುನಿಕ ಯುಗದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉಚಿತ ಪತ್ರಿಕೆ ಓದಲು ಅವಕಾಶ ಮಾಡಿಕೊಟ್ಟಿರುವುದು ಓದುವ ಹವ್ಯಾಸವನ್ನು ಉತ್ತೇಜಿಸಿದಂತಾಗುತ್ತದೆ. ಮಿನಿವಿಧಾನಸೌಧಕ್ಕೆ ಬೇರೆ ಕೆಲಸ ನಿಮಿತ್ತ ಬರುವ ಸಾರ್ವಜನಿಕರು, ಕೆಲಸ ಆಗುವ ತನಕ ಸಮ್ಮನೆ ಸಮಯ ಹಾಳು ಮಾಡುವುದಕ್ಕಿಂತ ಪತ್ರಿಕೆಗಳನ್ನ ಓದುವ ಮೂಲಕ ಪ್ರಪಂಚದ ವಿದ್ಯಮಾನ ತಿಳಿಯಲು ಸಹಕಾರಿಗುತ್ತದೆ. ಗ್ರಾಹಕರಿಗೆ ಉಚಿತ ಪತ್ರಿಕೆ ಒದಗಿಸುತ್ತಿರುವ ಶಂಕರಾಚಾರ‍್ಯ ಪ್ರಯತ್ನ ಶ್ಲಾಘನೀಯ.
ಅಶ್ವಥಿ ಎಸ್., ಎಸಿ ಕುಂದಾಪುರ.[/quote]

ಹೌದು. ಕುಂದಾಪುರದ ಪತ್ರಿಕಾ ವಿತರಕ ಶಂಕರಾಚಾರ‍್ಯ ಅವರು ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ ನೆನಪಿಗಾಗಿ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕರಿಗಾಗಿ ಉಚಿತವಾಗಿ ಸಹಿತ ಎಲ್ಲಾ ಕನ್ನಡ ಪತ್ರಿಕೆಗಳನ್ನು ಓದಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಾರ್ಥಕ ಭಾವದಿಂದ ಇದಕ್ಕೆ ಕಾರಣವನ್ನೂ ನೀಡುವ ಅವರು ಮಿನಿ ವಿಧಾನಸೌಧಕ್ಕೆ ಗ್ರಾಮೀಣ ಭಾಗದ ಜನರು ಬರುತ್ತಿದ್ದು, ತಮ್ಮ ಕೆಲಸ ಕಾರ‍್ಯ ಮುಗಿಯವ ತನಕ ಸುಮ್ಮನೆ ಕಾಲ ಕಳೆಯಬೇಕಾಗುತ್ತದೆ. ಹಾಗಾಗಬಾರದು ಎಂಬ ಉದ್ದೇಶದಿಂದ ಉಚಿತ ಪತ್ರಿಕೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಆಸ್ಪತ್ರೆಗಳಲ್ಲಿ ಉಚಿತ ಪತ್ರಿಕೆ ನೀಡುತ್ತಿದ್ದು, ಮಿನಿ ವಿಧಾನಸೌಧಕ್ಕೂ ಇನ್ನು ಮುಂದೆ ಪತ್ರಿಕೆ ಪೂರೈಕೆ ಮಾಡಲಾಗುತ್ತದೆ. ಸಾರ್ವಜನಿಕರು ಅಲ್ಲಿರುವ ಪತ್ರಿಕೆಗಳನ್ನು ಓದಿ ಮತ್ತೊಬ್ಬರಿಗೆ ಓದಲು ಅವಕಾಶ ಮಾಡಿಕೊಟ್ಟರೆ ನಮ್ಮ ಈ ಪ್ರಯತ್ನ ಸಾರ್ಥಕ ಎನ್ನುತ್ತಾರೆ.

ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್. ಸಾರ್ವಜನಿಕರಿಗೆ ಪತ್ರಿಕೆ ವಿತರಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದರು. ತಹಶೀಲ್ದಾರ್ ಗಾಯತ್ರಿ ಎನ್. ನಾಯಕ್, ಶ್ರೀದೇವಿ ಎಸ್. ಆಚಾರ‍್ಯ ಉಪಸ್ಥಿತರಿದ್ದರು.

??????????????????????????????? ???????????????????????????????

Leave a Reply

Your email address will not be published. Required fields are marked *

1 × 2 =