ಕುಂದಾಪುರ : ಉತ್ತಮ್ ಹೋಮಿಯೋ ಕ್ಲಿನಿಕ್‌ಗೆ ಬೆಳ್ಳಿ ಹಬ್ಬ ಸಂಭ್ರಮ

Call us

Call us

ಕೋಟೇಶ್ವರದಲ್ಲಿ ಡಾ.ಬಿ.ಡಿ. ಪಟೇಲ್‌ರಿಗೆ ಗುರುವಂದನೆ

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರದ ಹೆಸರಾಂತ ಹೋಮಿಯೋ ಚಿಕಿತ್ಸಾ ಕೇಂದ್ರ ಉತ್ತಮ್ ಹೋಮಿಯೋ ಕ್ಲಿನಿಕ್ ಎರಡೂವರೆ ದಶಕಗಳಿಂದ ಕುಂದಾಪುರದ ಪರಿಸರದ ಜನತೆಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಮನೆ ಮಾತಾಗಿದ್ದು ಇದೀಗ ಸಾರ್ಥಕ ಸೇವೆಯ ಸಂಭ್ರಮದಲ್ಲಿರುವ ಸಂಸ್ಥೆಯು ಗುರುವಂದನಾ ಕಾರ್ಯಕ್ರಮದ ಮೂಲಕ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.

Click here

Call us

Call us

ಏಪ್ರಿಲ್ 3 ರಂದು ಕೋಟೇಶ್ವರದ ಯುವ ಮೆರಿಡಿಯನ್ ಕನ್‌ವೆನ್ಶನ್ ಸೆಂಟರ್, ಮಿನಾಲ್‌ನಲ್ಲಿ ಸಂಜೆ 4 ಗಂಟೆಗೆ ಬೆಂಗಳೂರು ಹಾಗೂ ಚಂಡಿಗಡದ ಸರಕಾರಿ ಹೋಮಿಯಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನಿವೃತ್ತ ಪ್ರಾಂಶುಪಾಲರಾಗಿ ಹೋಮಿಯೋಪತಿ ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಯ ಹಿನ್ನಲೆಯಲ್ಲಿ ಡಾ. ಬಿ.ಡಿ. ಪಟೇಲ್ ಅವರಿಗೆ ಗುರುವಂದನೆ ಸಲ್ಲಿಸಲಾಗುತ್ತಿದೆ ಆಸಕ್ತ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ಡಾ. ಉತ್ತಮ ಕುಮಾರ ಶೆಟ್ಟಿ ತಿಳಿಸಿದ್ದಾರೆ.

ಬೆಳ್ಳಿ ಹಬ್ಬದ ಸಂಭ್ರಮ: 1991ರಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿರುವ ಹೆಗ್ಡೆ ಬಿಲ್ಡಿಂಗ್‌ನಲ್ಲಿ ಆರಂಭಗೊಂಡ ಉತ್ತಮ ಹೋಮಿಯೋ ಕ್ಲಿನಿಕ್ ಕುಂದಾಪುರದಲ್ಲಿ ಮೊದಲ ಹೋಮಿಯೋ ಚಿಕಿತ್ಸಾ ಕೇಂದ್ರವಾಗಿ ಸಾವಿರಾರು ಮಂದಿಯ ರೋಗಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಾ ಗುಣಮಟ್ಟದ ಉತ್ತಮ ಸೇವೆ, ಉತ್ತಮ ಮಾರ್ಗದರ್ಶನ ಮೂಲಕ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಬಳಿಕ ೨೦೦೯ರಲ್ಲಿ ಕುಂದಾಪುರದ ಶ್ರೀ ಕುಂದೇಶ್ವರ ರಸ್ತೆಯಲ್ಲಿ ವಿಶಾಲ ಸ್ಥಳವಕಾಶ, ಉತ್ತಮ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಸುಸಜ್ಜಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ದಿನೇ ದಿನೇ ಅಭಿವೃದ್ಧಿಯ ಪಥದಲ್ಲಿ ಸಾಗಿದ ಸಂಸ್ಥೆ ಇಂದು ಕುಂದಾಪುರದ ಅಗ್ರಮಾನ್ಯ ಸಂಸ್ಥೆಯಾಗಿ ಬೆಳೆದು ನಿಂತು ಸಾವಿರಾರು ರೋಗಿಗಳ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

Leave a Reply

Your email address will not be published. Required fields are marked *

three × one =