ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಒಂದು ತಿಂಗಳ ಕಾಲ ಹಮ್ಮಿಕೊಂಡ ‘ಆಪರೇಷನ್ ಸುರಕ್ಷಾ’ ಅಭಿಯಾನದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಬಸ್ಸು ಹಾಗೂ ಇನ್ನಿತರ ಘನ ವಾಹನಗಳಿಗೆ ಅಳವಡಿಸಲಾಗಿದ್ದ ಕರ್ಕಶ ಹಾರ್ನ್ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕುಂದಾಪುರದ ಶಾಸ್ತ್ರೀವೃತ್ತ, ಸಂಗಮ್, ಮುಳ್ಳಿಕಟ್ಟೆ ಮುಂತಾದೆಡೆ ಕಾರ್ಯಾರಣೆ ನಡೆಸಿದ್ದಾರೆ.
ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್ ಸಂಚಾರಿ ಠಾಣಾಧಿಕಾರಿ ಜಯ ಮತ್ತು ದೇವೇಂದ್ರ, ಮುಳ್ಳಿಕಟ್ಟೆಯಲ್ಲಿ ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹಾರನ್ ತೆರವುಗೊಳಿಸಿದ್ದಾರೆ.
ಕರ್ಕಶ ಶಬ್ದದ ಹಾರ್ನ್ಗಳಿಂದ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಇತರೆ ವಾಹನ ಚಾಲಕರು ವಿಚಲಿತರಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಎಂಬುದನ್ನು ಅರಿತ ಪೊಲೀಸರು ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯ ತನಕ ವ್ಯಾಕ್ಯೂಮ್ ಹಾರ್ನ್ ತೆರವುಗೊಳಿಸಿದ್ದು ಕುಂದಾಪುರದಲ್ಲಿ ಮೊದಲ ದಿನವೇ 75ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ಮಾಡಿ 40 ವಾಹನಗಳಿಗೆ ರೂ.100ರಂತೆ ದಂಡ ವಿಧಿಸಲಾಗಿದೆ.