ಕುಂದಾಪುರ ಕಾಂಗ್ರೆಸ್ : ರಾಜೀವ ಗಾಂಧಿ, ಅರಸ್ ಜನ್ಮದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕ್ರಾಂತಿಕಾರಿ ಹಾವನೂರು ಆಯೋಗದ ರಚನೆಯ ಮೂಲಕ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ರಾಜಕೀಯ ಪುನಶ್ಚೇತನಕ್ಕೆ ನಾಂದಿ ಹಾಡಿದವರು ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸುರವರು. ಉಳುವವನೇ ಹೊಲದೊಡೆಯ ಎಂಬ ಘೋಷ ವಾಕ್ಯದೊಂದಿಗೆ ಜಾರಿಗೆ ತಂದ ಭೂಸುಧಾರಣಾ ಖಾಯ್ದೆ ಬಡ, ಶೋಷಿತ ಗೇಣಿದಾರರ ಕುಟುಂಬದ ಭವಿಷ್ಯವನ್ನು ಉಜ್ವಲವಾಗಿಸಿತು. ಉಳ್ಳವರೇ ಅಧಿಕಾರಕ್ಕೆ ಬಂದು ದರ್ಪ ಪ್ರದರ್ಶಿಸುತ್ತಿದ್ದ ಕಾಲದಲ್ಲಿ ಸಮಾಜದ ದುರ್ಬಲ ವರ್ಗದ ಜನರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಜೀತ ಪದ್ಧತಿಯನ್ನು ನಿರ್ಮೂಲ ಮಾಡಿದ ಮಹಾನ್ ಪುರುಷ ಅರಸು ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಮಾಣಿ ಗೋಪಾಲ ಹೇಳಿದ್ದಾರೆ.

ಅವರು ಆ.20 ರಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಹಿತಿ ತಂತ್ರಜ್ಞಾನವನ್ನು ಈ ದೇಶಕ್ಕೆ ಪರಿಚಯಿಸಿದ ಕೀರ್ತಿ ಮಾಜಿ ಪ್ರಧಾನಿ ರಾಜೀವ ಗಾಂಧಿಯವರಿಗೆ ಸಲ್ಲುತ್ತದೆ. ಇಂದಿನ ಡಿಜಿಟಲ್ ಇಂಡಿಯಾದ ಕನಸು ೧೯೮೪ರಲ್ಲೇ ಕಂಡು ಆ ಕುರಿತು ದೇಶಾದ್ಯಂತ ಮಾಹಿತಿ ತಂತ್ರಜ್ಞಾನಕ್ಕೆ ಭದ್ರ ಅಡಿಪಾಯ ಹಾಕಿದ್ದರು. ಯಾವುದೇ ರಾಜಕೀಯ ಲಾಭನಷ್ಟದ ಲೆಕ್ಕಚಾರ ಇಟ್ಟುಕೊಳ್ಳದೆ ೧೮ ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡುವ ಮೂಲಕ ಯುವಜನರನ್ನು ದೇಶಕಟ್ಟುವಲ್ಲಿ ಬಳಸಿಕೊಂಡಿದ್ದರು. ಇಂದು ಮಾಹಿತಿ ತಂತ್ರಜ್ಞಾನದಲ್ಲಿ ಈ ದೇಶ ವಿಶ್ವಮಟ್ಟದಲ್ಲಿ ತಲೆ ಎತ್ತಿ ನಿಂತಿದ್ದರೆ ಅದಕ್ಕೆ ದಿವಂಗತ ರಾಜೀವ ಗಾಂಧಿಯವರ ಕೊಡುಗೆ ಅಪಾರ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕಾಸ್ ಹೆಗ್ಡೆ ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಶೇಖರ ಖಾರ್ವಿ, ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಹಿರಿಯ ಕಾಂಗ್ರೆಸಿಗ ಶಂಕರ ಪಿ. ಪೂಜಾರಿ, ಪುರಸಭಾ ಸದಸ್ಯರಾದ ಪ್ರಭಾವತಿ ಶೆಡ್ತಿ, ಶ್ರೀಮತಿ ಲಕ್ಷ್ಮೀ ಬಾ, ಶ್ರೀಧರ ಶೇರೆಗಾರ್, ಚಂದ್ರ ಅಮೀನ್, ಕೇಶವ ಭಟ್, ಅಬು ಮಹಮ್ಮದ್ ಮುಖಂಡರಾದ ಲಕ್ಷ್ಮಣ ಶೆಟ್ಟಿ, ಧರ್ಮಪ್ರಕಾಶ್, ಸದಾನಂದ ಖಾರ್ವಿ, ಕುಮಾರ ಕೆ., ಶೋಭಾ ಸಚ್ಛಿದಾನಂದ, ಆಶಾ ಕಾರ್ವೇಲ್ಲೋ, ಜ್ಯೋತಿ ಡಿ. ನಾಯ್ಕ, ಹೇಮಾ ಪೂಜಾರಿ, ವಿದ್ಯಾದರ ಕೆ.ವಿ., ಯುವ ಮುಖಂಡರಾದ ರವೀಂದ್ರ, ಪ್ರಶಾಂತ, ದಿನೇಶ್ ಬೆಟ್ಟ, ಶಶಿರಾಜ್, ಶಶಾಂಕ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಖಜಾಂಚಿ ಕೋಣಿ ನಾರಾಯಣ ಆಚಾರ್ ವಂದಿಸಿದರು.

Leave a Reply

Your email address will not be published. Required fields are marked *

twenty − nineteen =