ಕುಂದಾಪುರ: ಕಾರ್ಟೂನು ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರದಲ್ಲಿ ನಡೆದ ‘ಕಾರ್ಟೂನು ಹಬ್ಬ’ದ ಕಾರ್ಟೂನು ಸ್ಪರ್ದೆಗೆ ನೂರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದು ‘ಕೋಮು ಸೌಹಾರ್ದತೆ ವಿಷಯದ ಮೇಲೆ ಸ್ವರ್ಧೆ ನಡೆಯಿತು. ಕಾರ್ಟೂನು ಹಬ್ಬದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Call us

Call us

ಸ್ಪರ್ದೆಯ ವಿಷಯವನ್ನು ಘೋಷಿಸಿದ ಅರ್ಧ ಗಂಟೆಗಳ ತನಕ ವಿಧ್ಯಾರ್ಥಿಗಳು ತಮ್ಮ ತಮ್ಮ ಪೋಷಕರ ಜೊತೆ ಆ ವಿಷಯದ ಕುರಿತು ಚರ್ಚಿಸಿ ತಿಳಿದುಕೊಂಡು ನಂತರ ಚಿತ್ರಗಳನ್ನು ರಚಿಸುವ ಅವಕಾಶ ನೀಡಲಾಗಿತ್ತು. ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 170ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ದೆಯು 4ರಿಂದ 7ನೆಯ ತರಗತಿಯ ಒಳಗಿನ ವಿಧ್ಯಾರ್ಥಿಗಳಿಗೆ, 8ರಿಂದ 10ನೆಯ ತರಗತಿಯ ಒಳಗಿನ ವಿಧ್ಯಾರ್ಥಿಗಳಿಗೆ ಹಾಗೂ ಪಿಯುಸಿ ನಂತರದ ವಿಧ್ಯಾರ್ಥಿಗಳಿಗೆ ಹೀಗೆ ಮೂರು ವಿಭಾಗಗಳಲ್ಲಿ ನಡೆದಿತ್ತು. ಈ ಸ್ಪರ್ಧೆಯಲ್ಲಿ 4ರಿಂದ 7ನೆಯ ತರಗತಿಯ ಒಳಗಿನ ಮಕ್ಕಳಿಗೆ ಪ್ರಥಮ ಬಹುಮಾನವಾಗಿ 8 ಸಾವಿರ ರೂಪಾಯಿ, ದ್ವಿತೀಯ ಬಹುಮಾನವಾಗಿ 4 ಸಾವಿರ ರೂ, ತೃತೀಯ ಬಹುಮಾನವಾಗಿ 3 ಸಾವಿರ ರೂ, ಹಾಗೂ 1ಸಾವಿರ ರೂ.ಗಳ 5 ಸಮಾಧಾನಕರ ಬಹುಮಾನಗಳು. 8 ರಿಂದ 10ನೆಯ ತರಗತಿಯ ಮಕ್ಕಳಿಗೆ ಬಹುಮಾನವಾಗಿ ಪ್ರಥಮ 8 ಸಾವಿರ, ದ್ವಿತೀಯ 6 ಸಾವಿರ, ತೃತೀಯ 4 ಸಾವಿರ ರೂ.1ಸಾವಿರ ರೂ.ಗಳ 5 ಸಮಾಧಾನಕರ ಬಹುಮಾನಗಳು. ಪಿಯುಸಿ ನಂತರದ ವಿಧ್ಯಾರ್ಥಿಗಳಿಗೆ ಪ್ರಥಮ 10 ಸಾವಿರ ರೂ, ದ್ವಿತೀಯ 7 ಸಾವಿರ, ತೃತೀಯ 5 ಸಾವಿರ ಹಾಗೂ 1ಸಾವಿರ ರೂ.ಗಳ 5 ಸಮಾಧಾನಕರ ಬಹುಮಾನಗಳನ್ನು ಘೋಷಿಸಲಾಗಿತ್ತು.

Click here

Click Here

Call us

Call us

Visit Now

4ರಿಂದ 7ನೆಯ ತರಗತಿಯ ಒಳಗಿನ ಬಹುಮಾನ ವಿಜೇತ ವಿಧ್ಯಾರ್ಥಿಗಳು:
ಪ್ರಥಮ- ಅನಘಾ ಮಧುಕರ್ (ಲಿಟಲ್ ರಾಕ್ ಇಂಡಿಯನ್ ಸ್ಕೂಲ್) ದ್ವಿತೀಯ- ನಿಹಾನ್ (ಲಿಟಲ್ ರಾಕ್ ಇಂಡಿಯನ್ ಸ್ಕೂಲ್) ತೃತೀಯ- ಪ್ರೀತಮ್ ಡಿ.ಜೆ (ಲಿಟಲ್ ರಾಕ್ ಇಂಡಿಯನ್ ಸ್ಕೂಲ್) ಸಮಾಧಾನಕರ ಬಹುಮಾನಗಳ ವಿವರ: ಅಭಿಷೇಕ್ ಆಚಾರ್ (ಹೆಚ್ಎಮ್ಎಮ್ ಇಂಗ್ಲಿಷ್ ಮೀಡಿಯಂ ಶಾಲೆ) ಸುಷ್ಮಾ ಪೈ (ಯುಬಿಎಂಸಿ ಶಾಲೆ) ಧನ್ಯಾ ವಿ ರಾಯ್ಕರ್ (ಹೆಚ್ಎಂಎಂ) ಪ್ರೀತಮ್ ಸಂತೋಷ್ ಖಾರ್ವಿ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ) ಯಕ್ಷತ್ ಶೆಟ್ಟಿ (ವಿಶ್ವವಿನಾಯಕ ಸಿಬಿಎಸ್ಸಿ ಶಾಲೆ)

8ರಿಂದ 10ನೆಯ ತರಗತಿಯ ಒಳಗಿನ ಬಹುಮಾನ ವಿಜೇತ ವಿಧ್ಯಾರ್ಥಿಗಳು:
ಪ್ರಥಮ- ದೀಕ್ಷಿತಾ ಎನ್ ನಾಯ್ಕ್ (ಸರಕಾರಿ ಪ್ರೌಢ ಶಾಲೆ, ಸಿದ್ದಾಪುರ) ಧನ್ಯಾ ಜೆ. ಶೆಟ್ಟಿ (ಸರಕಾರಿ ಪ್ರೌಢ ಶಾಲೆ, ಸಿದ್ದಾಪುರ) ಅಮೃತಾ ವೈಧ್ಯ (ಒಳಕಾಡು ಶಾಲೆ) ಸಮಾಧಾನಕರ ಬಹುಮಾನಗಳ ವಿವರ: ತುಷಾರ್ ಕೆ.ಎಸ್ (ವೆಂಕಟರಮಣ ಇಂಗ್ಲಿಷ್ ಮೀಡಿಯಂ ಶಾಲೆ) ವೈಷ್ಣವಿ ಶೆಟ್ಟಿ (ಸರಕಾರಿ ಪೌಢ ಶಾಲೆ, ಸಿದ್ದಾಪುರ ) ನಿಶಾಂತ್ ಎ. ಶೆಟ್ಟಿ (ಲಿಟಲ್ ರಾಕ್ ಶಾಲೆ) ವರುಣ್ (ಸರಕಾರಿ ಪಿ.ಯು ಕಾಲೇಜು, ಉಪ್ಪುಂದ) ನೀರಜ್ (ವಿಕೆಆರ್).

ಪಿಯುಸಿ ನಂತರದ ವಿಭಾಗದಲ್ಲಿ ಬಹುಮಾನ ವಿಜೇತರಾದ ವಿಧ್ಯಾರ್ಥಿಗಳು:
ಪ್ರಥಮ- ಪ್ರದೀಶ್. ಕೆ (ಆಳ್ವಾಸ್ ಕಾಲೇಜು, ಮೂಡಬಿದರೆ) ದ್ವಿತೀಯ- ಸ್ಪೂರ್ತಿ.ಜಿ, (ಎಂಐಟಿಈ ಮೂಡಬಿದರೆ) ತೃತೀಯ- ಧನುಷ್ ಖಾರ್ವಿ (ವೆಂಕಟರಮಣ ಇಂಗ್ಲಿಷ್ ಮೀಡಿಯಂ) ಸಮಾಧಾನಕರ ಬಹುಮಾನಗಳ ವಿವರ: ಖುಷಿ ಆಚಾರ್ಯ (ಆರ್ಎನ್ಎಸ್ ಕಾಲೇಜು ಕುಂದಾಪುರ) ಆದಿತ್ಯಾ ಎನ್. ದೇವಾಡಿಗ (ಎಕ್ಸಲೆಂಟ್ ಕಾಲೇಜು, ಸುಣ್ಣಾರಿ) ಶಮಂತ್ ಆಚಾರ್ (ಭಂಡಾರ್ ಕಾರ್ಸ್ ಕಾಲೇಜು) ಸಂಧ್ಯಾ (ಶಂಕರನಾರಾಯಣ ಕಾಲೇಜು) ಸುಜಿತ್ (ಪಿಪಿಸಿ ಉಡುಪಿ).

Call us

ಬಹುಮಾನ ವಿತರಣಾ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾನಿಹಿಯ ಡಾ. ವೆಂಕಿ, ಖ್ಯಾತ ಮನೋವೈದ್ಯ ಡಾ. ಪಿ.ವಿ ಭಂಡಾರಿ, ಲೇಖಕ ಸತೀಶ್ ಶೆಟ್ಟಿ ವಕ್ವಾಡಿ, ಸಮಾಜ ಸೇವಕ ಅವಿನಾಶ್ ಕಾಮತ್ ನೆರವೇರಿಸಿದರು.

ಈ ಸಂಧರ್ಭದಲ್ಲಿ ವ್ಯಂಗ್ಯಚಿತ್ರಕಾರರಾದ ಜಿ.ಎಸ್ ನಾಗನಾಥ್, ವಿ.ಎಸ್ ಕೇಂಜ, ಎಚ್.ಎಸ್ ವಿಶ್ವನಾಥ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟಕ ಖ್ಯಾತ ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ, ಗುಜ್ಜಾರಪ್ಪ, ನಂಜುಂಡ ಸ್ವಾಮಿ, ಜೇಮ್ಸ್ ವಾಜ್, ಜೀವನ್ ಶೆಟ್ಟಿ, ಮೇಗರವಳ್ಳಿ ಸುಬ್ರಹ್ಮಣ್ಯ, ಸತೀಶ್ ಬಾಬು, ಚಂದ್ರಶೇಖರ ಶೆಟ್ಟಿ, ಕೇಶವ ಸಸಿಹಿತ್ಲು, ಸಂತೋಷ್ ಸಸಿಹಿತ್ಲು, ಚಂದ್ರ ಗಂಗೊಳ್ಳಿ, ನಟರಾಜ ಅರಳಸುರುಳಿ, ಏಕನಾಥ ಬೊಂಗಾಳೆ ಜಿ.ಬಿ ಕಲೈಕಾರ್, ರವಿಕುಮಾರ್, ದತ್ತಾತ್ರಿ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕರಾದ ಉದಯ ಗಾಂವ್ಕರ್ ಮತ್ತು ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

thirteen + three =