ಕುಂದಾಪುರ: ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶ ನಡೆಯಿತು.

Click Here

Call us

Call us

ಜೆಸಿಟಿಯು ಮುಖಂಡ ಎಚ್.ನರಸಿಂಹ ಮಾತನಾಡಿ ಕೋವಿಡ್ನಿಂದ ಹಲವು ಕ್ಷೇತ್ರಗಳಲ್ಲಿ ದುಡಿಯುವ ಜನರು ಕೆಲಸ ಕಳೆದುಕೊಂಡಿದ್ದಾರೆ. ಜನರ ಕಷ್ಟಗಳಿಗೆ ಧಾವಿಸಬೇಕಾದ ಸರ್ಕಾರಗಳು ದುಡಿಯುವ ಜನರಿಗಿರುವ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿವೆ, ಸಹಾಯಧನ ಕಸಿದುಕೊಂಡಿದೆ’ ಕೇಂದ್ರ ಸರ್ಕಾರ ತಂದಿರುವ 11 ಸುಗ್ರೀವಾಜ್ಞೆಗಳು ನೇರವಾಗಿ ದುಡಿಯುವ ಜನರ ಆದಾಯದ ಮೇಲೆ ದುಷ್ಪರಿಣಾಮಗಳು ಬೀಳಲಿದೆ. ಎಪಿಎಂಸಿ ತಿದ್ದುಪಡಿ, ಭೂಸುಧಾರಣ ಕಾಯ್ದೆ ತಿದ್ದುಪಡಿ, ರೈಲ್ವೆ ಖಾಸಗೀಕರಣ, ವಿದ್ಯುತ್ ಖಾಸಗೀಕರಣ, ಕಲ್ಲಿದ್ದಲು, ತೈಲ ಖಾಸಗೀಕರಣವು ದೇಶದ ದೊಡ್ಡ ಬಂಡವಾಳಗಾರರನ್ನು ಬೆಳೆಸಲು ಇದೆ, ಸಾಮಾನ್ಯ ಜನರ ಆದಾಯ ಹೆಚ್ಚಿಸುವ ನೀತಿಗಳಲ್ಲ. ಹಕ್ಕುಗಳನ್ನು ಬಿಜೆಪಿ ಕಸಿಯುತ್ತಿರುವುದರಿಂದ, ಇದೇ 26 ರಂದು ಸಂವಿಧಾನ ರಚನ ದಿವಸ್ ದಿನದ ಮುಷ್ಕರ ಅತ್ಯಂತ ಮಹತ್ವದ್ದಾಗಿದೆ’ ಎಂದರು.

Click here

Click Here

Call us

Visit Now

ಜೆಸಿಟಿಯು ಮುಖಂಡ ಸುರೇಶ್ ಕಲ್ಲಾಗರ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ವಿಮಾನ ನಿಲ್ದಾಣವನ್ನು ಅದಾನಿ ಕಂಪನಿಗೆ 50 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು, ಕೇಂದ್ರದ ಎನ್‌ಡಿಎ ಸರ್ಕಾರದ ಈ ನಿರ್ಧಾರಗಳನ್ನು ಪ್ರತಿಭಟಿಸಲು ಇದೇ 26 ರ ಮುಷ್ಕರವನ್ನು ಯಶಸ್ವಿಗೊಳಿಸಬೇಕು’ ಎಂದರು.

ಕಾರ್ಮಿಕ ಸಂಘಟನೆಯ ಹಿರಿಯ ಮುಖಂಡ ಮಹಾಬಲ ವಡೇರ ಹೋಬಳಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಜೆಸಿಟಿಯು ಜಿಲ್ಲಾ ಮುಖಂಡ ಕೆ.ಶಂಕರ್ ಮಾರ್ಗದರ್ಶನ ಮಾಡಿದರು. ಆಟೋರಿಕ್ಷಾ ಟ್ಯಾಕ್ಸಿ ಮೆಟಡೋರ್ ಡ್ರೈವರ್ಸ್ ಅಸೋಸಿಯೇಶನ್ (ಇಂಟಕ್) ಪ್ರಧಾನ ಕಾರ್ಯದರ್ಶಿ ಮಾಣಿ ಉದಯ ಕುಮಾರ್. ಇಂಟಕ್ ಕಾರ್ಮಿಕ ಸಂಘದ ಶಶಿರಾಜ್, ರೋಶನ್ ಶೆಟ್ಟಿ,ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘದ (ಸಿಐಟಿಯು) ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು, ರಾಜುದೇವಾಡಿಗ, ವಿದ್ಯುತ್ ಕಾರ್ಮಿಕರ ಸಂಘದ ಮುಖಂಡ ವೆಂಕಟೇಶ್ ಕುಂದಾಪುರ ಇದ್ದರು.

Leave a Reply

Your email address will not be published. Required fields are marked *

fourteen + 16 =