ಕುಂದಾಪುರ: ಕುಬುಡೋ ಬುಡೋಕಾನ್ ಕರಾಟೆ ಡೋ.ಕರ್ನಾಟಕ ಇವರು ಅಜ್ಜರಕಾಡಿನ ಮಹಾತ್ಮಗಾಂಧಿ ಕ್ರೀಡಾಂಗಣ ಏರ್ಪಡಿಸಿದ 3ನೇ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ಕರಾಟೆ ಸ್ಪರ್ಧಾಕೂಟ 2016 ಬ್ಲಾಕ್ ಬೆಲ್ಟ್ ವಿಭಾಗಲ್ಲಿ ಕು.ದಿವ್ಯಾ.ಎಚ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಕುಮಿಟೆ ವಿಭಾಗದಲ್ಲಿ ದ್ವೀತಿಯ ಸ್ಥಾನ ಹಾಗೂ ವೆಪನ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕೋಟ ಆರಕ್ಷಕ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ.ಎಚ್.ಎಸ್ ಹಾಗೂ ಸುಗುಣಾ ದಂಪತಿಯ ಪುತ್ರಿಯಾಗಿರುತ್ತಾರೆ.ಕಿರಣ್ ಕುಂದಾಪುರ ಅವರಲ್ಲಿ ತರಬೇತಿ ಪಡೆದಿರುತ್ತಾರೆ.
ಕುಂದಾಪುರ: ಕುಬುಡೋ ಬುಡೋಕಾನ್ ಕರಾಟೆಯಲ್ಲಿ ದಿವ್ಯಾಗೆ ಬ್ಲಾಕ್ ಬೆಲ್ಟ್
