ಕುಂದಾಪುರ: ಕೃಷಿಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ.

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಾಲಬಾಧೆಯಿಂದ ನೊಂದ ಕೃಷಿಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಾಲ್ಕಲ್‌ನಲ್ಲಿ ನಡೆದಿದೆ. ತಂಗಚ್ಚನ್ ಯಾನೆ ಥೋಮಸ್ (49) ಮೃತ ದುರ್ದೈವಿ.

ಘಟನೆಯ ವಿವರ:
ಕುಂದಾಪುರ ಹಾಲ್ಕಲ್ ನಿವಾಸಿಯಾದ ತಂಗಚನ್ ತನ್ನ ಎರಡು ಎಕರೆ ಭೂಮಿಯಲ್ಲಿ ರಬ್ಬರ್, ತೆಂಗಿನತೋಟ ಹಾಗೂ ನರ್ಸರಿಯನ್ನು ಹೊಂದಿದ್ದು, ಕೃಷಿಯ ನಿರ್ವಹಣೆಗಾಗಿ ವಿವಿಧ ಬ್ಯಾಂಕುಗಳಲ್ಲಿ ಸುಮಾರು ೫ಲಕ್ಷಕ್ಕೂ ಮಿಕ್ಕಿ ಸಾಲ ಮಾಡಿಕೊಂಡಿದ್ದ. ಸಾಲವನ್ನು ಮರುಪಾವತಿ ಮಾಡುವಂತೆ ಬ್ಯಾಂಕಿನಿಂದ ನೋಟಿಸ್ ಜಾರಿಯಾಗಿತ್ತು. ಕುಂದಾಪ್ರ ಡಾಟ್ ಕಾಂ. ಆದರೆ ನಿರೀಕ್ಷೆಯಂತೆ ಬೆಳೆ ಬಾರದ ಹಿನ್ನೆಲೆಯಲ್ಲಿ ಅಪಾರ ನಷ್ಟ ಅನುಭವಿಸಿದ್ದನೆನ್ನಲಾಗಿದ್ದು, ಸಾಲ ಮರುಪಾವತಿ ಮಾಡಲಾಗದೇ ಆತ್ಯಹತ್ಯೆಗೆ ಮುಂದಾಗಿದ್ದ. ಈವರೆಗೆ ತಾಲೂಕಿನಲ್ಲಿ ೫ ರೈತರ ಆತ್ಮಹತ್ಯಾ ಪ್ರಕರಣ ವರದಿಯಾಗಿದೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ರೈತನ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರು.

Leave a Reply

Your email address will not be published. Required fields are marked *

fourteen + 14 =